ಈ ಬಾರಿಯ ಐಪಿಎಲ್ ನ ಹರಾಜು ಪಟ್ಟಿಯಲ್ಲಿದ್ದಾರೆ ಈ ರಾಜ್ಯದ ಕ್ರೀಡಾ ಸಚಿವ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2022 ರ ಆವೃತ್ತಿಯ ಹರಾಜಿಗೆ ಅಂತಿಮ ಪಟ್ಟಿ ಸಿದ್ದವಾಗಿದ್ದು, ಇದೇ ತಿಂಗಳ 12, 13ರಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.
ಐಪಿಎಲ್ ಹರಾಜಿಗೋಸ್ಕರ 1200ಕ್ಕೂ ಅಧಿಕ ಪ್ಲೇಯರ್ಸ್ ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 590 ಪ್ಲೇಯರ್ಸ್​ ಹೆಸರು ಫೈನಲ್ ಮಾಡಿದ್ದು, ಅಚ್ಚರಿಯ ಎಂದರೆ ಇದರಲ್ಲಿಪಶ್ಚಿಮ ಬಂಗಾಳದ ಕ್ರೀಡಾ ಸಚಿವರ ಹೆಸರು ಇದೆ.
ಹೌದು, 2021ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ವೇಳೆ ಟಿಎಂಸಿಪಕ್ಷದ ಅಭ್ಯರ್ಥಿಯಾಗಿ ಕಣ್ಣಕ್ಕಿಳಿದು ಜಯಗಳಿಸಿದ ಕ್ರಿಕೆಟರ್ ಮನೋಜ್ ತಿವಾರಿ ಬಂಗಾಳದ ಕ್ರೀಡಾ ಸಚಿವರಾಗಿದ್ದು, ಇದೀಗ ಐಪಿಎಲ್ ಹರಾಜಿನಲ್ಲೂ ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.
ಈ ಹಿಂದೆ ಮನೋಜ್ ತಿವಾರಿ ಡೆಲ್ಲಿ ಡೇರ್​​ ಡೆವಿಲ್ಸ್​​, ಕೋಲ್ಕತ್ತಾ ನೈಟ್ ರೈಡರ್ಸ್, ಪುಣೆ ಸೂಪರ್​ಜೈಂಟ್ಸ್​​​, ಪಂಜಾಬ್​​ ಕಿಂಗ್ಸ್ ಪರವಾಗಿ 98 ಪಂದ್ಯಗಳನ್ನಾಡಿದ್ದಾರೆ. 7 ಅರ್ಧಶತಕ ಸೇರಿದಂತೆ 1,695ರನ್​ಗಳಿಕೆ ಮಾಡಿದ್ದು, ಒಂದು ವಿಕೆಟ್​ ಸಹ ಪಡೆದುಕೊಂಡಿದ್ದಾರೆ. 2018ರ ಐಪಿಎಲ್​ನಲ್ಲಿ ಕೊನೆಯದಾಗಿ ಪಂಜಾಬ್ ಪರ ಕಣಕ್ಕಿಳಿದಿದ್ದರು.
ಟೀಂ ಇಂಡಿಯಾ ಪರ 12 ಏಕದಿನ, ಮೂರು ಟಿ20 ಪಂದ್ಯಗಳನ್ನಾಡಿರುವ ತಿವಾರಿ, 125 ಪ್ರಥಮ ದರ್ಜೆ ಹಾಗೂ 163 ಲಿಸ್ಟ್​ A ಪಂದ್ಯಗಳನ್ನಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!