ಖ್ಯಾತ ನಟಿಯಂತೆ ಆಗಲು 40ಕ್ಕೂ ಹೆಚ್ಚು ಬಾರಿ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡ ಮಾಡೆಲ್: ಕೊನೆಗೆ ಆಗಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಾಲಿವುಡ್​ ತಾರೆ, ಖ್ಯಾತ ರೂಪದರ್ಶಿ ಕಿಮ್ ಕಾರ್ಡಶಿಯನ್ ಅವರಂತೆ ಆಗಲು ತಾರೆಯೊಬ್ಬಳು 12 ವರ್ಷಗಳ ಅವಧಿಯಲ್ಲಿ 40ಕ್ಕೂ ಹೆಚ್ಚು ಬಾರಿ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿದ್ದಾಳೆ.

ಬಳಿಕ ಇದು ಯಾವುದು ಸರಿಯಾಗುತ್ತಿಲ್ಲ ಎಂದು ಮತ್ತೆ ಮತ್ತೆ ಮೊದಲಿನಂತೆ ಕಾಣುವಂತೆ ಸರ್ಜರಿಗೊಳಗಾಗಿದ್ದಾರೆ.
ಈಕೆ ಮೊದಲು ಕಿಮ್ ಕಾರ್ಡಶಿಯನ್ ರೂಪ ತಾಳಲು $600K (4.7 ಕೋಟಿ ಭಾರತೀಯ ರೂಪಾಯಿ) ಖರ್ಚು ಮಾಡಿದರೆ ಬಳಿಕ ಅಸಲಿ ರೂಪಕ್ಕಾಗಿ ಮತ್ತೆ $120K (95,49,660.00 ರೂ.) ಖರ್ಚು ಭರಿಸಿದ್ದಾರೆ.

ಹೌದು, 29 ವರ್ಷ ರಿಯಾಲಿಟಿ ಸೂಪರ್‌ಸ್ಟಾರ್ ಜೆನ್ನಿಫರ್ ಪ್ಯಾಂಪ್ಲೋನಾ , 12 ವರ್ಷಗಳ ಅವಧಿಯಲ್ಲಿ ಬರೋಬ್ಬರಿ 40 ಕ್ಕೂ ಹೆಚ್ಚು ಬಾರಿ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಳ್ಳುವ ಮೂಲಕ ಫ್ಯಾಷನ್​ ಜಗತ್ತಿನಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಪ್ಲಾಸ್ಟಿಕ್​ ಸರ್ಜರಿಯನ್ನು ಖಾಯಿಲೆಯಾಗಿ ಪರಿವರ್ತಿಸಿಕೊಂಡಿರುವ ಈ ತಾರೆ ಕೊನೆಗೆ ತನ್ನದೇ ರೂಪ ಪಡೆದುಕೊಂಡಿದ್ದಾರೆ.
ನಾನು ಅಲ್ಪ – ಸ್ವಲ್ಪ ಕಾರ್ಡಶಿಯನ್ ಅವರನ್ನೇ ಹೋಲುತ್ತಿದ್ದು, ಜನರು ನನ್ನನ್ನು ಕಾರ್ಡಶಿಯನ್ ಎಂದೇ ಕರೆಯುತ್ತಿದ್ದರು.
ಆರಂಭದಲ್ಲಿ ಇದು ಖುಷಿ ತರಿಸಿತು. ಆದರೆ, ಕಾಲಕ್ರಮೇಣ ಇದು ನನಗೆ ಕಿರಿಕಿರಿಯುಂಟು ಮಾಡಲು ಪ್ರಾರಂಭಿಸಿತು. ಹಾಗಾಗಿ ಅಸಲಿ ರೂಪ ತಾಳಲು ಮತ್ತೆ ಪ್ಲಾಸ್ಟಿಕ್​ ಸರ್ಜರಿಯ ಮೊರೆ ಹೋಗಬೇಕಾಯಿತು ಎಂದು ತಾರೆಯು ತನ್ನ ಮನದ ತೊಳಲಾಟ ಬಿಚ್ಚಿಟಿದ್ದಾರೆ.ನಾನು ಕೆಲಸ ಮಾಡಿದ್ದೇನೆ. ಸಾಕಷ್ಟು ಓದಿದ್ದೇನೆ. ಉದ್ಯಮಿ ಕೂಡ ಆಗಿದ್ದೇನೆ. ನನ್ನ ವೈಯಕ್ತಿಕ ಜೀವನದಲ್ಲಿ ಈ ಎಲ್ಲ ಸಾಧನೆಗಳನ್ನು ಹೊಂದಿದ್ದೇನೆ. ಆದರೆ, ಜನರು ನನ್ನ ಅಸಲಿ ಹೆಸರಿನಿಂದ ಕರೆಯುವುದನ್ನು ಬಿಟ್ಟು ಕಾರ್ಡಶಿಯನ್‌ ಅಂತೆಯೇ ಕರೆಯುತ್ತಿದ್ದರು. ತೃಪ್ತಿ ತರಿಸದ ಕಾರಣ ನಾನು ಮತ್ತೆ ಮೂಲ ರೂಪ ಹೊಂದಲು ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಳ್ಳಬೇಕಾಯಿತು ಎಂದಿದ್ದಾರೆ.

ಜೆನ್ನಿಫರ್ 17ನೇ ವಯಸ್ಸಿನಲ್ಲಿ ಇದ್ದಾಗಲೇ ಈ ರೀತಿಯ ಸರ್ಜರಿ ಮಾಡಿಸಿಕೊಳ್ಳುವ ಖಯಾಲಿ ಮಾಡಿಕೊಂಡಿದ್ದರಂತೆ. ಸತತ 12 ವರ್ಷಗಳ ಕಾಲ ಅವರು 40ಕ್ಕೂ ಹೆಚ್ಚು ಬಾರಿ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡು ಅಚ್ಚರಿಗೆ ಕಾರಣರಾಗಿದ್ದಾರೆ. ಇದೀಗ ತಮ್ಮ ಬಗ್ಗೆ ತಾವೇ ಬೇಸರ ಹೊರ ಹಾಕಿಕೊಂಡಿರುವ ಅವರು ಈ ಮಾರ್ಗವನ್ನು ಅನುಸರಿಸದಂತೆ ಮನವಿ ಮಾಡಿಕೊಂಡಿದ್ದಾರೆ.

ಇದ್ದೀಯ ಅಂತಿಮ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ, ಈ ಪ್ರಮಾಣದ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!