Tuesday, June 28, 2022

Latest Posts

‘ಅಪ್ಪೆ ಮಿಡಿ’ ಚಿತ್ರ ಇರುವ ವಿಶೇಷ ಅಂಚೆ ಚೀಟಿ ಬಿಡುಗಡೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಶಿವಮೊಗ್ಗ:

ಮಲೆನಾಡಿನ ಅಪ್ಪೆಮಿಡಿಗೆ ಜಾಗತಿಕ ಸ್ಥಾನಮಾನ ದೊರಕಿಸಲು ಅಂಚೆ ಇಲಾಖೆ ಕೈ ಜೋಡಿಸಿದೆ. ಇದರ ಭಾಗವಾಗಿ
ಭಾರತೀಯ ಅಂಚೆ ಇಲಾಖೆ ವಿಶೇಷ ಅಂಚೆ ಚೀಟಿಯನ್ನು ಹೊರತಂದಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಪ್ಪೆ ಮಿಡಿ ಚಿತ್ರ ಇರುವ ವಿಶೇಷ ಅಂಚೆ ಚೀಟಿಯನ್ನು ಮಂಗಳವಾರ ಬಿಡುಗಡೆ ಮಾಡಲಾಯಿತು. ದಕ್ಷಿಣ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಡಿಎಸ್‌ವಿಆರ್ ಮೂರ್ತಿ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಿದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ.ರಾಮಚಂದ್ರ ಮಾತನಾಡಿ, ಪಶ್ಚಿಮಘಟ್ಟ ನದಿ ದಂಡೆಗಳಲ್ಲಿ ಅಪ್ಪೆ ಮಿಡಿ ಮಾವಿನ ಮರಗಳನ್ನು ಕಾಣಬಹುದು. ಹಿಂದೆ ಇದರ ವಿಶೇಷತೆ ಬಗ್ಗೆ ಅರಿವು ಇಲ್ಲದೇ ಮರದ ರೆಂಬೆಗಳನ್ನು ಕತ್ತರಿಸಿ ಮರಗಳನ್ನೇ ಹಾಳು ಮಾಡಿದ್ದಾರೆ. ನಂತರ ಕಸಿ ಗಿಡಗಳನ್ನು ಬೆಳೆಸುವ ಮೂಲಕ ಅಪ್ಪೆ ಮಿಡಿ ತಳಿಗಳ ಸಂರಕ್ಷಣೆ ಮಾಡುವ ಕೆಲಸ ನಡೆದಿದೆ. ತೋಟಗಾರಿಕೆ ಇಲಾಖೆ ಕೂಡಾ ಇದಕ್ಕೆ ಬೆಂಬಲವಾಗಿ ನಿಂತಿದೆ. ಅಪ್ಪೆ ಮಿಡಿ ಬೆಳೆಗಾರರ ಕ್ಲಸ್ಟರ್‌ಗಳನ್ನು ಮಾಡಿ ಪ್ರೋತ್ಸಾಹ ನೀಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಅಪ್ಪೆ ಮಿಡಿ ತಳಿ ಬೆಳೆಸಲು ಸಾಕಷ್ಟು ರೈತರು ಮುಂದಾಗುತ್ತಿದ್ದಾರೆ ಎಂದರು.
ಗಣೇಶ್ ಕಾಕಾಲ್ ಪ್ರಯತ್ನ..
ಭಾರತೀಯ ಅಂಚೆ ಚೀಟಿಯಲ್ಲಿ ಅಪ್ಪೆ ಮಿಡಿಗೆ ಸ್ಥಾನ ದೊರಕಿಸಿಕೊಡುವಲ್ಲಿ ಸಾಗರ ತಾಲೂಕು ಹೆಗ್ಗೋಡು ಕಾಕಾಲ್ ಉಪ್ಪಿನಕಾಯಿ ಉದ್ಯಮದ ಗಣೇಶ್ ಕಾಕಾಲ್ ಶ್ರಮಿಸಿದ್ದಾರೆ. 2009 ರಿಂದಲೇ ಈ ಬಗ್ಗೆ ಸತತ ಪ್ರಯತ್ನ ನಡೆಸಿ, ಅಪ್ಪೆ ಮಿಡಿಗೆ ಭೌಗೋಳಿಕ ಮಾನ್ಯತೆ ಪಡೆಯುವಲ್ಲಿ ಯಶಸ್ವಿಯಾದರು. ಇದೀಗ ಅಂಚೆ ಚೀಟಿ ಹೊರಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss