Thursday, August 11, 2022

Latest Posts

ಚಿತ್ರ ನಟ ದರ್ಶನ್ ಹಲ್ಲೆ ಪ್ರಕರಣ: ಎಸಿಪಿಯಿಂದ ಹೋಟೆಲ್ ಸಿಬ್ಬಂದಿ ವಿಚಾರಣೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸ ದಿಗಂತ ವರದಿ, ಮೈಸೂರು:

ಸಂದೇಶ್ ದಿ ಪ್ರಿನ್ಸ್ ಹೋಟೆಲ್‌ನ ಸಿಬ್ಬಂದಿಯ ಮೇಲೆ ನಟ ದರ್ಶನ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬOಧಿಸಿದOತೆ ಹೋಟೆಲ್ ಸಿಬ್ಬಂದಿಯ ವಿಚಾರಣೆಯನ್ನು ಎಸಿಪಿ ಶಶಿಧರ್ ನಡೆಸಿದರು.
ಶುಕ್ರವಾರ ಹೋಟೆಲ್‌ಗೆ ಭೇಟಿ ನೀಡಿದ್ದ ಎಸಿಪಿ ಶಶಿಧರ್ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ಅಲ್ಲಿರುವ ಸಿಸಿಟಿವಿಯ ಫುಟೇಜ್‌ಗಳನ್ನು ಸಂಗ್ರಹಿಸಿ, ಹೋಟೆಲ್‌ನ ಕೆಲ ಸಿಬ್ಬಂದಿಯಿOದ ಮಾಹಿತಿಯನ್ನು ಪಡೆದಿತ್ತು. ಅಲ್ಲದೇ ವಿಚಾರಣೆಗೆ ಹಾಜರಾಗುವಂತೆ ಸಿಬ್ಬಂದಿಗೆ ನೋಟಿಸ್ ನೀಡಿತ್ತು. ಈ ಹಿನ್ನಲೆಯಲ್ಲಿ
ಎಸಿಪಿ ಕಚೇರಿಗೆ ಆಗಮಿಸಿದ ಹೋಟೆಲ್ ಸಿಬ್ಬಂದಿಯಾದ ಆಕಾಶ್ ಹಾಗೂ ಪ್ರಸನ್ನ ಅವರ ವಿಚಾರಣೆಯನ್ನು ಎಸಿಪಿ ಶಶಿಧರ್ ನಡೆಸಿ, ಘಟನೆಗೆ ಸಂಬOಧಿಸಿದ ಮಾಹಿತಿಯನ್ನು ಪಡೆದುಕೊಂಡರು.
ಆಡಿಯೋ ಸಂದೇಶ್‌ರದ್ದಲ್ಲ: ಈ ನಡುವೆ ಮೈಸೂರಿನ ಶ್ರೀರಾಂಪುರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಚಿತ್ರ ನಟ ದರ್ಶನ್ ಸ್ನೇಹಿತ ಹರ್ಷ ಮೆಲಂಟಾ, ಘಟನೆಗೆ ಸಂಬOಧಿಸಿದOತೆ ಪೊಲೀಸರಿಂದ ನನಗೆ ಯಾವುದೇ ನೋಟಿಸ್ ಬಂದಿಲ್ಲ, ಒಂದು ವೇಳೆ ನೋಟಿಸ್ ಬಂದರೆ, ವಿಚಾರಣೆಗೆ ಹಾಜರಾಗುತ್ತೇನೆ ಎಂದು ತಿಳಿಸಿದರು.
ಸಂದೇಶ್ ಅವರು ಚಿತ್ರ ನಿರ್ದೇಶಕ ಇಂದ್ರಜಿತ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿರುವ ವಿಚಾರವಾಗಿ ಬಿಡುಗಡೆಯಾಗಿರುವ ಆಡಿಯೋದಲ್ಲಿ ಮಾತನಾಡಿರುವ ಎಲ್ಲ ವಿಚಾರಗಳು ಸತ್ಯಕ್ಕೆ ದೂರವಾದುದ್ದು, ಆಡಿಯೋ ಕೇಳಿದರೆ ಇದು ಸಂದೇಶ್ ಅವರದ್ದಲ್ಲ ಅನ್ನಿಸುತ್ತಿದೆ. ಸಂದೇಶ್ ಹಾಗೂ ನನ್ನ ನಡುವೆ ವ್ಯವಹಾರಿಕವಾಗಿ ಉತ್ತಮ ಸ್ನೇಹ ಇದೆ. ನಾನು ಸಂದೇಶ್ ಅವರನ್ನು ಅಣ್ಣ ಅಂತ ಯಾವತ್ತೂ ಕರೆದಿಲ್ಲ. ನಾನು ಯಾವ ಸಾಲವನ್ನೂ ಮಾಡಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದರು. ಅಂದು ದರ್ಶನ್ ಪಾರ್ಟಿ ಕೊಡುವಾಗ ನಾನು ಕುಟುಂಬ ಸಮೇತ ಹೋಗಿದ್ದೆ. ಹೋಟೆಲ್‌ನಲ್ಲಿ ಊಟ ಚೆನ್ನಾಗಿದೆ ಅಂತ ದರ್ಶನ್ ಪಾರ್ಟಿ ಕೊಟ್ಟರು. ಪಾರ್ಟಿಯಲ್ಲಿ 8 ಮಂದಿ ಇದ್ದೆವು. ಸರ್ವ್ ಮಾಡುವಾಗ ವ್ಯತ್ಯಾಸ ಆಯ್ತು ಅಷ್ಟೇ. ದರ್ಶನ್ ಅವರು ವೇಟರ್‌ಗೆ ಬೈಯ್ದಿದ್ದಾರೆ ಅಷ್ಟೇ. ಬಳಿಕ ಸಂದೇಶ್ ಅವರು ಅಲ್ಲಿ ಬಂದು ಎಲ್ಲರನ್ನೂ ಸಮಾಧಾನ ಮಾಡಿದರು. ನಂತರ ರೂಂಗೆ ಹೋದೆವು. ಬೆಳಗ್ಗೆ ತಿಂಡಿ ತಿಂದು ಹೊರ ಬಂದೆವು. ದರ್ಶನ್ ಯಾರ ಮೇಲೂ ಹಲ್ಲೆ ಮಾಡಿಲ್ಲ ಎಂದು ಅಂದಿನ ಘಟನೆ ಕುರಿತು ವಿವರಿಸಿದರು.
ಸತ್ಯ ಹೊರಬರಬೇಕು: ಈ ನಡುವೆ ರಾಜ್ಯ ಹೋಟೆಲ್ ಕಾರ್ಮಿಕರ ಸಂಘದ ಅಧ್ಯಕ್ಷರು ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್‌ಗೆ ಭೇಟಿ ನೀಡಿ, ಘಟನೆಯ ಬಗ್ಗೆ ಸಿಬ್ಬಂದಿಯಿOದ ಮಾಹಿತಿ ಪಡೆದರು. ಸಂಘದ ಅಧ್ಯಕ್ಷೆ ಪ್ರಿಯಾ ರಮೇಶ್ ಮಾಧ್ಯಮಗಳೊಂದಿಗೆ ಮಾತನಾಡಿ, ನನಗೆ ಯಾರಿಂದಲೂ ಹಲ್ಲೆ ಆಗಿಲ್ಲ. ಸಪ್ಲೈ ಮಾಡಲು ತಡವಾಗಿದ್ದ ಕಾರಣ ದರ್ಶನ್ ಬೈಯ್ದಿದ್ದಾರೆ ಎಂದು ಸಿಬ್ಬಂದಿ ಗಂಗಾಧರ್ ಮಾಹಿತಿ ನೀಡಿದ್ದಾರೆ ಎಂದರು. ಗಂಗಾಧರ್ ಅವರಿಗೆ ಯಾರು ಬೆದರಿಕೆ ಹಾಕಿದ್ದಾರೆ. ಬೆದರಿಕೆ ಹಾಕಿದ್ದರೆ ಈ ಬಗ್ಗೆ ಪೊಲೀಸರು ತನಿಖೆ ಮಾಡಿ ಸತ್ಯ ಹೊರತರಬೇಕು ಎಂದು ಆಗ್ರಹಿಸಿದರು.
ತೋಟದಲ್ಲಿ ವಿಶ್ರಾಂತಿ ಪಡೆಯುತ್ತಿರುವ ದರ್ಶನ್ : ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬOಧಪಟ್ಟ ಆಡಿಯೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಆದರೆ, ಚಿತ್ರ ನಟ ದರ್ಶನ್ ಇದ್ಯಾವುದಕ್ಕೂ ಪ್ರತಿಕ್ರಿಯೆ ನೀಡದೆ ತಮ್ಮ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss