Monday, August 8, 2022

Latest Posts

ಸ್ಥಳದಲ್ಲೇ ಬಿಎಸ್ಎನ್ಎಲ್ ಟವರ್ ಸಮಸ್ಯೆ ಇತ್ಯರ್ಥ ಪಡಿಸಿದ ಸಂಸದ ಗದ್ದಿಗೌಡರ

ಹೊಸ ದಿಗಂತ ವರದಿ, ಬಾಗಲಕೋಟೆ:

ಜಿಲ್ಲೆಯ ಹೊನ್ಯಾಳ, ಗಡದಿನ್ನಿ ಸೇರಿದಂತೆ ಎಂಟು ಗ್ರಾಮಗಳಿಗೆ ಬಿಎಸ್ಎನ್ಎಲ್ ನೆಟವರ್ಕ್ ಸಮಸ್ಯೆಯಿದ್ದು ಕೂಡಲೇ ಅಲ್ಲಿ ಸಮರ್ಪಕವಾಗಿ ಕೆಲಸ ನಿರ್ವಹಿಸುವ ಟವರ್ ಅಳವಡಿಸಬೇಕು ಎಂದು ಸಂಸದ ಪಿ.ಸಿ.ಗದ್ದಿಗೌಡರವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸಂಸದರ ಕಾಯರ್ಾಲಯದ ಸಭಾಭವನದಲ್ಲಿ ಮಂಗಳವಾರ ಭಾರತೀಯ ಸಂಚಾರ ನಿಗಮದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸಾರ್ವಜನಿಕರ ಕುಂದು ಕೊರತೆ ಆಲಿಸಿದರು.
ಹೊನ್ಯಾಳ, ಗಡದಿನ್ನಿ , ಯತ್ನಟ್ಟಿ, ಬಾದರದಿನ್ನಿ ಗ್ರಾಮಸ್ಥರು ನಮ್ಮ ಊರಿನ ಕಡೆ ಸರಿಯಾಗಿ ಬಿಎಸ್ಎನ್ಎಲ್ ನೆಟವರ್ಕ್ ಬರುವುದಿಲ್ಲ. ಎಂದು ಸಂಸದರ ಮುಂದೆ ಸಮಸ್ಯೆಯನ್ನು ತಿಳಿಸಿದರು.
ಗ್ರಾಮಸ್ಥರ ಸಮಸ್ಯೆ ಆಲಿಸಿದ ತಕ್ಷಣವೇ ಸಂಸದರು ಬೆಂಗಳೂರಿನ ಚೀಪ್ ಟೆಲಿಕಾಂ ಅಧಿಕಾರಿಗೆ ಕರೆ ಮಾಡಿ ಹೊನ್ಯಾಳ, ಗಡದಿನ್ನಿ ಸೇರಿ ಎಂಟು ಗ್ರಾಮಗಳಲ್ಲಿ ಉಪಯುಕ್ತವಾಗುವಂತೆ ಬಿಎಸ್ಎನ್ಎಲ್ ಟವರ ಹಾಕಿಕೊಡಬೇಕು ಎಂದರು. ಶೀಘ್ರದಲ್ಲೇ ಈ ಸಮಸ್ಯೆಯನ್ನು ಬಗೆ ಹರಿಸುತ್ತೇವೆ ಎಂದು ಅಧಿಕಾರಿಗಳು ಸಂಸದರಿಗೆ ದೂರವಾಣಿ ಮೂಲಕ ತಿಳಿಸಿದರು.
ಹೊನ್ಯಾಳ, ಗಡದಿನ್ನಿ, ಯತ್ನಟ್ಟಿ ಮತ್ತು ಬಾದರದಿನ್ನಿ ಗ್ರಾಮಗಳು ಸೇರಿದಂತೆ ಸುತ್ತಮುತ್ತಲಿನ ಎಂಟು ಗ್ರಾಮಗಳಿಗೆ ಉಪಯೋಗವಾಗುವಂತೆ ಅಲ್ಲಿ ಬಿಎಸ್ಎನ್ಎಲ್ ಟವರ ನಿಮರ್ಾಣ ಮಾಡಬೇಕು ಎಂದು ಪತ್ರವನ್ನು ಸಹ ಬೆಂಗಳೂರಿನ ಚೀಪ್ ಟೆಲಿಕಾಂ ಅಧಿಕಾರಿಗೆ ಸಂಸದರು ಬರೆದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss