Wednesday, June 29, 2022

Latest Posts

ಒಮಿಕ್ರಾನ್ ಭೀತಿ: ನೆದರ್ ಲ್ಯಾಂಡ್ಸ್ ನಲ್ಲಿ ಒಂದು ತಿಂಗಳ ದೀರ್ಘಾವಧಿ ಲಾಕ್ ಡೌನ್ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋವಿಡ್ ನಿಂದ ಚೇರಿಸಿಕೊಳ್ಳುತ್ತಿದ್ದ ರಾಷ್ಟ್ರಗಳಿಗೆ ಈಗ ಒಮಿಕ್ರಾನ್ ಸೋಂಕಿನ ಭೀತಿ ಆರಂಭವಾಗಿದೆ. ಮುಂಜಾಗ್ರತಾ ಕ್ರಮವಾಗಿ ಯುರೋಪ್ ರಾಷ್ಟ್ರವಾದ ನೆದರ್ ಲ್ಯಾಂಡ್ ನಲ್ಲಿ ಒಂದು ತಿಂಗಳ ದೀರ್ಘಾವಧಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.
ಈ ಬಗ್ಗೆ ಪ್ರಧಾನಿ ಮಾರ್ಕ್ ರುಟ್ಟೆ ಮಾಹಿತಿ ನೀಡಿದ್ದು, ದೇಶದಲ್ಲಿ ಒಂದು ತಿಂಗಳ ಕಾಲ ಲಾಕ್ ಡೌನ್ ಮಾಡುವುದು ಅನಿವಾರ್ಯವಾಗಿದೆ. ದೇಶದಾದ್ಯಂತ ಜನವರಿ 22ರವರೆಗೆ ಎಲ್ಲಾ ಸಾರ್ವಜನಿಕ ಪ್ರದೇಶಗಳಿಗೂ ನಿರ್ಬಂಧ ಹೇರಲಾಗಿದೆ ಎಂದರು.
ರೆಸ್ಟೋರೆಂಟ್, ಬಾರ್ ಗಳು, ಬ್ಯೂಟಿ ಪಾರ್ಲರ್ ಗಳು, ಸಂಗೀತ ಕಚೇರಿ, ಚಿತ್ರಮಂದಿರಗಳು ಸೇರಿದಂತೆ ಎಲ್ಲಾ ಅತಿ ಮುಖ್ಯವಲ್ಲದ ಅಂಗಡಿಗಳು ಮುಚ್ಚಲ್ಪಡುತ್ತವೆ ಎಂದರು.
ಇನ್ನು ಒಳಾಂಗಣ ಕ್ರೀಡಾಂಗಣಗಳು ಮುಚ್ಚಲು ಆದೇಶಿಸಲಾಗಿದೆ. ಉಳಿದಂತೆ ಶಾಲೆ ಕಾಲೇಜುಗಳಿಗೂ ಜ.9ರವರೆಗೆ ಬೀಗಹಾಕಲು ತಿಳಿಸಲಾಗಿದೆ. ಅಗತ್ಯವಿರುವ ಸೂಪರ್ ಮಾರ್ಕೆಟ್ ಹಾಗೂ ಫಾರ್ಮಸಿಗಳನ್ನು ನಿರ್ಬಂಧಿತ ಸಮಯದಲ್ಲಿ ಮಾತ್ರ ಕೆಲಸ ಮಾಡಲು ಅವಕಾಶ ಕೊಡಲಾಗಿದೆ.
ಅಂತ್ಯಕ್ರಿಯೆಗಳಲ್ಲಿ ಭಾಗಿಯಾಗುವವರ ಸಂಖ್ಯೆಯನ್ನು 100ಕ್ಕೆ ಮಿತಿಗೊಳಿಸಿ ನಿರ್ಬಂಧಿಸಲಾಗಿದೆ. ಇನ್ನೂ ಕ್ರಿಸ್ ಮಸ್ ಹಬ್ಬಕ್ಕೆ ಕೇವಲ 4 ಜನರೊಂದಿಗೆ ಒಳಾಂಗಣದಲ್ಲಿ ಆಚರಿಸಲು ಅನುಮತಿ ನೀಡಲಾಗಿದ್ದು, ನಿಯಮ ಉಲ್ಲಂಘಿಸಿದರೆ ಈ ಸಂಖ್ಯೆಯನ್ನು 1ಕ್ಕೆ ನಿರ್ಬಂಧಿಸಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss