Tuesday, July 5, 2022

Latest Posts

ಸದ್ಯದ ಸ್ಥಿತಿಯಲ್ಲಿ ನೋಟ್​ ಮುದ್ರಣ ಮಾಡಲ್ಲ: ಸಚಿವೆ ನಿರ್ಮಲಾ ಸೀತಾರಾಮನ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………….

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕೋರೋನಾ ವೈರಸ್​ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಹೆಚ್ಚಿನ ಕರೆನ್ಸಿ (ನೋಟು) ಮುದ್ರಣ ಮಾಡುವ ಯೋಜನೆ ಅಥವಾ ಪ್ರಸ್ತಾವಣೆ ನಮ್ಮ ಮುಂದಿಲ್ಲ. ಕೋವಿಡ್​ ಸೋಂಕಿನಿಂದ ಉಂಟಾಗಿರುವ ಆರ್ಥಿಕ ಸಂಕಷ್ಟ, ನಿರುದ್ಯೋಗ ನಷ್ಟ ತಪ್ಪಿಸಲು ಹಾಗೂ ಆರ್ಥಿಕ ಚೇತರಿಕೆ ಸರಿದೂಗಿಸಲು ಹೆಚ್ಚಿನ ಕರೆನ್ಸಿ ಮುದ್ರಣ ಮಾಡುವಂತೆ ಅನೇಕ ಅರ್ಥಶಾಸ್ತ್ರಜ್ಞರು ನಮಗೆ ಸಲಹೆ ನೀಡಿದ್ದಾರೆ. ಆದರೆ ಸದ್ಯದ ಸ್ಥಿತಿಯಲ್ಲಿ ಹೆಚ್ಚಿನ ನೋಟ್​ ಮುದ್ರಣ ಮಾಡಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿಗೆ ಸೋಮವಾರ ತಿಳಿಸಿದ್ದಾರೆ.
‘ದೇಶದ ಒಟ್ಟು ಆಂತರಿಕ ಉತ್ಪಾದನೆಯು (ಜಿಡಿಪಿ) 2020-21ರಲ್ಲಿ ಶೇಕಡ (-)7.3ರಷ್ಟು ಕುಸಿತ ಕಂಡಿರುವ ಅಂದಾಜು ಇದೆ’ ಎಂದು ನಿರ್ಮಲಾ ಅವರು ಲಿಖಿತ ಉತ್ತರದಲ್ಲಿ ಲೋಕಸಭೆಗೆ ತಿಳಿಸಿದ್ದಾರೆ.
‘ಅರ್ಥ ವ್ಯವಸ್ಥೆಯ ಮೂಲ ಅಂಶಗಳು ಗಟ್ಟಿಯಾಗಿವೆ. ಲಾಕ್‌ಡೌನ್‌ ನಿರ್ಬಂಧಗಳನ್ನು ಹಂತ ಹಂತವಾಗಿ ಸಡಿಲಗೊಳಿಸಿದ್ದು ಮತ್ತು ಆತ್ಮನಿರ್ಭರ ಭಾರತ ಯೋಜನೆಯ ಮೂಲಕ ನೀಡಿದ ತ್ವರಿತ ಸಹಾಯದ ಕಾರಣದಿಂದಾಗಿ ಅರ್ಥ ವ್ಯವಸ್ಥೆಯು 2020-21ರ ದ್ವಿತೀಯಾರ್ಧದಲ್ಲಿ ಚೇತರಿಕೆಯ ಹಾದಿಗೆ ಮರಳಿದೆ’ ಎಂದು ನಿರ್ಮಲಾ ಅವರು ಹೇಳಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss