Sunday, October 1, 2023

Latest Posts

ಚರ್ಚೆಯ ನಡುವೆ ಹೆಚ್ಚಿದೆ ದೇಶದಲ್ಲಿ ಆರ್‌ಎಸ್‌ಎಸ್‌ಗೆ ಸೇರ್ಪಡೆಯಾಗುವ ಯುವಕರ ಸಂಖ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಭಾಗ್ಯನಗರ: ದೇಶದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುರಿತು ಪರ ವಿರೋಧ ಚರ್ಚೆಗಳು ನಡೆಯುತ್ತಿರುವಂತೆ ಆರ್‌ಎಸ್‌ಎಸ್‌ಗೆ ಸೇರ್ಪಡೆಯಾಗುವ ಯುವಕ ಸಂಖ್ಯೆಯೂ ವೃದ್ಧಿಯಾಗುತ್ತಿದೆ.

ಹೈದರಾಬಾದ್‌ನ ಭಾಗ್ಯನಗರದಲ್ಲಿ ಮೂರು ದಿನಗಳ ಕಾಲ ನಡೆದ ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಸಮನ್ವಯ ಬೈಠಕ್ ನಂತರ ಸಹ ಸರಕಾರ್ಯವಾಹ ಡಾ. ಮನಮೋಹನ್ ವೈದ್ಯ ಈ ಕುರಿತು ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಿದ್ದಾರೆ.

ಕೋವಿಡ್‌ನಿಂದ ಸ್ಥಗಿತಗೊಂಡಿದ್ದ ರಾಷ್ಟ್ರೀಯ ಸ್ವಯಂಸೇವ ಸಂಘದ ಚಟುವಟಿಕೆಗಳು ಮತ್ತೊಮ್ಮೆ ವೇಗ ಪಡೆದುಕೊಳ್ಳುತ್ತಿವೆ. 2019ಕ್ಕೆ ಹೋಲಿಸಿದರೆ ಸಂಘದ ದೈನಂದಿನ ಶಾಖೆಗಳ ಕಾರ್ಯಚಟುವಟಿಕೆಗಳು ಪ್ರಸಕ್ತ ಶೇ. 93ರಷ್ಟು ಹಾಗೂ ಸಾಪ್ತಾಹಿಕ ಶಾಖೆಗಳ ಚಟುವಟಿಕೆಗಳು ಶೇ. 98ರಷ್ಟು ಪುನರಾರಂಭವಾಗಿವೆ. ಜನ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿಕೊಂಡು ಶಾಖೆಗಳಿಗೆ ಆಗಮಿಸುತ್ತಿದ್ದಾರೆ. ಜನರಿಗೆ ಆರ್‌ಎಸ್‌ಎಸ್‌ಗೆ ಸೇರ್ಪಡೆಯಾಗುವ ಉತ್ಸುಕತೆಯೂ ಹೆಚ್ಚಿದೆ ಎಂದು ತಿಳಿಸಿದರು.

ಶಾಖೆಗಳ ಮೂಲಕ ಯುವಕರು ಆರ್‌ಎಸ್‌ಎಸ್‌ಗೆ ಸೇರುತ್ತಿದ್ದಾರೆ. ಸಂಘವನ್ನು ಹೇಗೆ ಪರಿಚಯ ಮಾಡಿಕೊಳ್ಳಬೇಕೆಂದು ತಿಳಿಯವರು ಆರ್‌ಎಸ್‌ಎಸ್ ವೆಬ್‌ಸೈಟ್‌ನಲ್ಲಿ ಬಂದು ಸೇರುತ್ತಿದ್ದಾರೆ. 2017-2021ರವರೆಗೆ ಪ್ರತೀ ವರ್ಷ ಸರಾಸರಿ 1ರಿಂದ 1.5ಲಕ್ಷ ಮಂದಿ ಯುವಕರು ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದ ಡಾ. ವೈದ್ಯ, ದೇಶದಲ್ಲಿ 50ಸಾವಿರ ದೈನಂದಿನ ಶಾಖೆಗಳು ದೇಶಾದ್ಯಂತ ನಡೆಯುತ್ತಿವೆ. ಇದರಲ್ಲಿ ಶೇ. 60ರಷ್ಟು ಯುವಜನರೇ ಇದ್ದಾರೆ ಎಂದರು.

ಆರ್‌ಎಸ್‌ಎಸ್‌ನ 36 ಅಂಗಸಂಸ್ಥೆಗಳ ಮೂಲಕ ಸಮಾಜದಲ್ಲಿ ಸೇವಾ ಕಾರ್ಯ ನಡೆಯುತ್ತಿದೆ. ದೇಶದಲ್ಲಿರುವ ಅಪೌಷ್ಠಿಕತೆ ಸಮಸ್ಯೆ ನಿವಾರಣೆಗೆ, ನಿರುದ್ಯೋಗ ಸಮಸ್ಯೆ ನಿವಾರಣೆ, ನೂತನ ಶಿಕ್ಷಣ ನೀತಿ ಕುರಿತು ಮಾಹಿತಿ ನೀಡುವ ಕೆಲಸ ಮಾಡುತ್ತಿವೆ. ಹಿಂದಿನ ವರ್ಷಗಳಲ್ಲಿ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸಂಘದ ಸ್ವಯಂಸೇವಕರು ಸೇವಾಕಾರ್ಯದಲ್ಲಿ ತೊಡಗಿದ್ದರು. ಇದೀಗ ಕೋವಿಡ್‌ನ ಮೂರನೇ ಅಲೆ ಪ್ರಾರಂಭವಾಗುವ ಹಂತದಲ್ಲಿದೆ. ಸೇವಾ ಕಾರ್ಯಗಳನ್ನು ನಡೆಸಲು ದೇಶದ 6000ಕ್ಕೂ ಅಧಿಕ ತಾಲೂಕುಗಳಲ್ಲಿ 10ಲಕ್ಷ ಸ್ವಯಂಸೇವಕರಿಗೆ ತರಬೇತಿ ನೀಡಲಾಗಿದೆ ಎಂದು ಹೇಳಿದರು.

250 ಅಪ್ರತಿಮ ವೀರರ ಪರಿಚಯ
ದೇಶಕ್ಕೆ ಸ್ವಾತಂತ್ರ್ಯ ಬಂದು 75ನೇ ವರ್ಷಾಚರಣೆಯ ಸಂದರ್ಭದಲ್ಲಿದ್ದೇವೆ. ಕೇವಲ ನಿರ್ದಿಷ್ಟ ವ್ಯಕ್ತಿಗಳಿಂದಷ್ಟೇ ಸ್ವಾತಂತ್ರ್ಯ ಲಭಿಸಿತು ಎನ್ನುವ ಮಾತು ಸರಿಯಲ್ಲ. ಇಂತಹ ಸಹಸ್ರಾರು ಜನರ ಸಹಭಾಗಿತ್ವ ಹಾಗೂ ಶ್ರಮದಿಂದ ದೇಶ ಸ್ವತಂತ್ರಗೊಂಡಿದೆ. ಅಂತಹ 250 ಅಪ್ರತಿಮ ವೀರರ ಕತೆಗಳನ್ನು ಸಮಾಜಕ್ಕೆ ತಿಳಿಸುವ ಪ್ರಯತ್ನ ನಡೆದಿದೆ. ಅಲ್ಲದೇ ಸಂಸ್ಕಾರ ಭಾರತಿಯ ವತಿಯಿಂದ 75 ನಾಟಕಗಳ ಮೂಲಕ ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸ ಜನರಿಗೆ ಪ್ರಸಾರ ಮಾಡುವ ಕೆಲಸ ನಡೆಯುತ್ತಿದೆ ಎಂದು ಡಾ. ಮನಮೋಹನ್ ವೈದ್ಯ ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!