VIRAL VIDEO | ಭೂಕಂಪಕ್ಕೂ ಹೆದರದ ನರ್ಸ್‌ಗಳು, ನವಜಾತ ಶಿಶುಗಳ ಜೀವ ಉಳಿಸಲು ಮುಂದಾದ್ರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ತವ್ಯ ಮೊದಲೋ, ಜೀವ ಮೊದಲೋ? ಜೀವ ಇದ್ರೆ ತಾನೆ ಕರ್ತವ್ಯ ಮಾಡೋಕೆ ಅನ್ನೋರು ಒಂದು ವರ್ಗ, ಜೀವ ಇರೋವರೆಗೂ ಕರ್ತವ್ಯ ಮಾಡುತ್ತಲೇ ಇರ‍್ತೀವಿ ಅನ್ನೋರು ಇನ್ನೊಂದು ವರ್ಗ…

ಟರ್ಕಿ ಭೂಕಂಪದ ವೇಳೆ ಕರ್ತವ್ಯ ಪ್ರಜ್ಞೆ ಮೆರೆದ ನರ್ಸ್‌ಗಳ ವಿಡಿಯೋ ಇದೀಗ ವೈರಲ್ ಆಗಿದೆ. ಆಸ್ಪತ್ರೆ ಭೂಕಂಪನದಿಂದ ನಡುಗುತ್ತಿದೆ. ಕಟ್ಟಡ ಬಿದ್ದರೂ ಬೀಳಬಹುದು, ಬೇಗ ಇಳಿದು ಹೊರಗೆ ಹೋಗೋಣ ಎನ್ನುವ ಬದಲು ಈ ನರ್ಸ್‌ಗಳು ನವಜಾತ ಶಿಶುಗಳಿಗಾಗಿ ಇಟ್ಟಿದ್ದ ಇನ್ಕ್ಯುಬೇಟರ್ ಅಲುಗಾಡದಂತೆ ಅದನ್ನು ಹಿಡಿದು ನಿಂತಿದ್ದಾರೆ.

ಟರ್ಕಿಯ ಗಾಜಿಯಾಂಟೆಪ್ ಪ್ರದೇಶದ ಆಸ್ಪತ್ರೆ ವಿಡಿಯೋ ಇದಾಗಿದ್ದು, ಭೂಕಂಪದಲ್ಲಿ ಕಟ್ಟಡಗಳು ಬೀಳುತ್ತಿರುವುದು ಗೊತ್ತಿದ್ದರೂ ಮಕ್ಕಳನ್ನು ಉಳಿಸಲು ನರ್ಸ್‌ಗಳು ಧಾವಿಸಿದ್ದಾರೆ.

ದೇಶದ ಅತಿ ಕೆಟ್ಟ ಭೂಕಂಪ ಪೀಡಿತ ಪ್ರದೇಶದಲ್ಲಿ ಒಂದಾದ ಗಾಜಿಯಾಂಟೆಪ್‌ನಲ್ಲಿ ಕಟ್ಟಡ ಅಲುಗಾಡಲು ಆರಂಭವಾದಾಗ ಇನ್ಕ್ಯುಬೇಟರ್ ಬಳಿ ಯಾರೂ ಇರಲಿಲ್ಲ. ಎಲ್ಲೋ ಇದ್ದ ನರ್ಸ್‌ಗಳು ತಮ್ಮ ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗೋ ಬದಲು, ಕರ್ತವ್ಯ ನಿಷ್ಠೆ ಮೆರೆದು ಇನ್ಕ್ಯುಬೇಟರ್‌ಗಳತ್ತ ಧಾವಿಸಿ, ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ನೋಡಿದ್ದಾರೆ. ಒಳಗಿನ ಸಿಸಿಟಿವಿ ಫೂಟೇಜ್ ಇದಾಗಿದ್ದು,ಟರ್ಕಿಯ ಪತ್ರಕರ್ತರೊಬ್ಬರು ಈ ವಿಡಿಯೋ ಶೇರ್ ಮಾಡಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!