spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 27, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಚನಕಾರರು ಅಚ್ಚ ಕನ್ನಡದ ಬೇಸಾಯಗಾರರು: ಶಾಂತಮಲ್ಲಿಕಾರ್ಜುನ ಸ್ವಾಮೀಜಿ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………

ಹೊಸದಿಗಂತ ವರದಿ, ಮಡಿಕೇರಿ:

ವಚನಕಾರರು ಸಂಸ್ಕೃತದ ಆಚಾರ್ಯರಲ್ಲ, ಅವರು ಅಚ್ಚ ಕನ್ನಡದ ಬೇಸಾಯಗಾರರು. ವಚನದ ಭಾಷೆ ಅದು ದೇವವಾಣಿ ಅಲ್ಲ ಜನವಾಣಿ ಎಂದು ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನುಡಿದರು. ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಏರ್ಪಡಿಸಿದ ವಚನ ಗಾಯನ ಕಾರ್ಯಕ್ರಮವನ್ನು ಗೂಗಲ್ ಮೀಟ್ ನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಈ ನಾಡು ಆಚಾರ್ಯ ಪರಂಪರೆ, ದಾಸ ಪರಂಪರೆ, ಶರಣ ಪರಂಪರೆಗಳನ್ನು ಜಗತ್ತಿಗೆ ಪರಿಚಯಿಸಿ ಕೊಟ್ಟಿದೆ. ಈ ಮಣ್ಣಲ್ಲಿ ಸಹಸ್ರಾರು ಮಂದಿ ಸಂತರು, ಶರಣರು ಆಗಿರುವುದನ್ನು ನಾವು ಕಾಣುತ್ತೇವೆ. ತಾಯಂದಿರಿಗೆ, ಹೆಣ್ಣುಮಕ್ಕಳಿಗೆ ಒಂದು ಅಪ್ರತಿಮವಾದ ಸ್ಥಾನಮಾನವನ್ನು ಕಲ್ಪಿಸಿಕೊಟ್ಟಿದೆ. ಶರಣರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಸುಮಾರು 33,000 ವಚನಕಾರ್ತಿಯರು ಇದ್ದರು ಎಂದು ಅವರು ನುಡಿದರು.
‘ನುಡಿದರೆ ಮುತ್ತಿನ ಹಾರದಂತಿಬೇಕು’ ವಚನ ಹಾಡಿ ಕಾರ್ಯಕ್ರಮ ಉದ್ಘಾಟಸಿದರು.
ಮುಖ್ಯ ಅತಿಥಿಗಳಾಗಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಹೆಚ್.ವಿ.ಶಿವಪ್ಪ ಮಾತನಾಡಿ, ವಚನ ಸಾಹಿತ್ಯ ಹಲವಾರು ಪ್ರಕಾರಗಳಿಂದ ರಚನೆಯಾಗಿದೆ. ದುಃಖದ ಸನ್ನಿವೇಶವಿರಬಹುದು, ಶೃಂಗಾರವಿರಬಹುದು, ಸಾಮಾಜಿಕ ಬದ್ಧತೆ ಇರಬಹುದು, ಆರ್ಥಿಕ ವ್ಯವಸ್ಥೆಯ ಪರಿಕಲ್ಪನೆ ಇರಬಹುದು ಅವೆಲ್ಲವೂ ಜನರಿಗೆ ಮನಮುಟ್ಟುವಂತೆ ಶರಣರು ವಚನಗಳಲ್ಲಿ ಹೇಳಿದ್ದಾರೆ. ವಚನಗಳು ಜನಸಾಮಾನ್ಯರಿಗೆ ಅರ್ಥವಾಗುವ ಅತಿ ಸುಲಭವಾದ ಕನ್ನಡ ಭಾಷೆಯಲ್ಲಿ ರಚಿತವಾಗಿದೆ ಎಂದರು.
ಬಳಗದ ಅಧ್ಯಕ್ಷ ಕೇಶವ ಕಾಮತ್ ಎಂ. ಪಿ. ಮಾತನಾಡಿ ವಚನ ಗೀತ ಗಾಯನ ಕಾರ್ಯಕ್ರಮಕ್ಕೆ ಗಾಯಕರ ಅಭೂತಪೂರ್ವ ಬೆಂಬಲ ಬಂದಿದೆ. ಹನ್ನೆರಡನೇ ಶತಮಾನಕ್ಕೂ ಹಿಂದೆ ಸಾಹಿತ್ಯ ಕ್ಲಿಷ್ಟಕರವಾದ ಸಂಸ್ಕೃತ ಭಾಷೆಯಲ್ಲಿದ್ದು ಅದು ಜನ ಸಾಮಾನ್ಯರಿಗೆ ತಲುಪುತ್ತಿರಲಿಲ್ಲ. ವಚನ ಸಾಹಿತ್ಯ ಬಂದ ನಂತರ ಅವು ಸುಲಭ ಕನ್ನಡದಲ್ಲಿ ಇದ್ದು ಎಲ್ಲರಿಗೂ ತಲುಪುವಂತಾಯಿತು. ವಚನ ಸಾಹಿತ್ಯದ ಗಾಯನದ ಜತೆಗೆ ಅದರ ಅರ್ಥ ಮತ್ತು ಒಳಹರವು ಅರ್ಥ ಮಾಡಿಕೊಂಡು ಅದರಲ್ಲಿರುವ ಸಕಾರಾತ್ಮಕ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ 15 ಗಾಯಕರು ಶಿವ ಶರಣರು ರಚಿಸಿದ ವಿವಿದ ವಚನಗಳನ್ನು ಹಾಡಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ, ಬಳಗದ ಸಲಹೆಗಾರ ಟಿ.ಪಿ.ರಮೇಶ್, ಉಪಾಧ್ಯಕ್ಷರಾದ ಎಂ.ಇ.ಮೊಹಿದ್ದೀನ್, ರೇವತಿ ರಮೇಶ್, ಪ್ರಧಾನ ಕಾರ್ಯದರ್ಶಿ ವಿಲ್ಫ್ರೆಡ್ ಕ್ರಾಸ್ತಾ, ನಿರ್ದೇಶಕರಾದ ಬಿ.ಎ.ಷಂಶುದ್ದೀನ್, ಎಸ್.ಐ. ಮುನಿರ್ ಅಹ್ಮದ್, ,ಬಿ.ಎನ್.ಮನುಶೆಣೈ, ಕೆ.ಟಿ.ಬೇಬಿ ಮ್ಯಾಥ್ಯೂ, ಟಿ.ಜಿ.ಪ್ರೇಮಕುಮಾರ್, ಉಮೇಶ್ ಭಟ್, ಬಿ.ಆರ್.ಜೋಯಪ್ಪ, ರಂಜಿತ್ ಕೆ.ಯು, ಪ್ರತಿಮಾ ರೈ, ಸಂಗೀತ ಮತ್ತು ನೃತ್ಯ ಶಿಕ್ಷಕರುಗಳಾದ ವಿ.ಟಿ ಶ್ರೀನಿವಾಸ್, ವತ್ಸಲಾ ನಾರಾಯಣ್, ಚಂದ್ರಕಲಾ ವಿಷ್ಣುಮೂರ್ತಿ, ರಾಜೇಶ್ ಆಚಾರ್ಯ ಇತರರು ಉಪಸ್ಥಿತರಿದ್ದರು.
ಎಂಬತ್ತಕ್ಕೂ ಹೆಚ್ಚು ಜನರು ಕಾರ್ಯಕ್ರಮಕ್ಕೆ ಸೇರ್ಪಡೆಗೊಂಡಿದ್ದು 300ಕ್ಕೂ ಹೆಚ್ಚು ಗಾನಪ್ರಿಯರು ವೀಕ್ಷಿಸಿದರು.
ಬಳಗದ ನಿರ್ದೇಶಕ ಟಿ.ಜಿ.ಪ್ರೇಮ್ ಕುಮಾರ್ ನಿರೂಪಿಸಿದರು. ಕಾರ್ಯಕ್ರಮದ ಸಂಯೋಜಕ ಲೋಕನಾಥ್ ಅಮೆಚೂರ್ ಸ್ವಾಗತಿಸಿದರು. ಬಳಗದ ಉಪಾಧ್ಯಕ್ಷೆ ಪಿ.ರೇವತಿ ರಮೇಶ್ ಮತ್ತು ಕೋಶಾಧಿಕಾರಿ ಕಡ್ಲೇರ ತುಳಸಿ ಮೋಹನ್ ಅತಿಥಿಗಳ ಪರಿಚಯ ಮಾಡಿದರು. ಬಳಗದ ನಿರ್ದೇಶಕ ಕೆ.ವಿ.ಉಮೇಶ್ ವಂದಿಸಿದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss