ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಇತಿಹಾಸಗಳಲ್ಲಿ ನಾವು ರಾಜರು ಅನೇಕ ರಾಣಿಯರನ್ನು ವಿವಾಹವಾಗುತ್ತಿದ್ದರು ಎಂಬುದನ್ನು ಕೇಳಿದ್ದೇವೆ ಆಗೆಲ್ಲ ಮದುವೆ ವಿಚಾರವಾಗಿ ಯಾವುದೇ ಕಾನೂನುಗಳು ಇಲ್ಲದ್ದರಿಂದ ಎಷ್ಟೇ ಮದುವೆಯಾದ್ರೂ ಸಹ ಪ್ರಶ್ನಿಸುವವರು ಯಾರೂ ಇರ್ತಾ ಇರಲಿಲ್ಲ. ಆದರೆ 21ನೇ ಶತಮಾನದಲ್ಲಿ 2-3 ಪತ್ನಿಯರನ್ನು ಹೊಂದಿರುವವರನ್ನೂ ಕಂಡಿದ್ದೇವೆ. ಆದರೆ, ಇಲ್ಲೊಬ್ಬ ಮಹಾಶಯ 37 ಬಾರಿ ವಿವಾಹವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿ ಮಾಡಿದ್ದಾನೆ.
ಈತ ತನ್ನ 28 ಹೆಂಡತಿಯರು, 135 ಮಕ್ಕಳು ಹಾಗೂ 126 ಮೊಮ್ಮಕ್ಕಳ ಸಮ್ಮುಖದಲ್ಲಿ 37ನೇ ಮದುವೆಯಾಗುತ್ತಿರುವ ವಿಡಿಯೋ ವೈರಲ್ ಆಗಿದೆ. 45 ಸೆಕೆಂಡುಗಳ ವಿಡಿಯೋ ಕ್ಲಿಪ್ನ ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನೆಟಿಜನ್ಸ್, ಎಂಥಾ ಅದೃಷ್ಟವಯ್ಯಾ! ಎಂದಿದ್ದಾರೆ. ಇನ್ನೊಬ್ಬರು ಇಲ್ಲಿವರೆಗೆ ಒಬ್ಬಳನ್ನು ಮದುವೆಯಾಗಲು ಸಾಧ್ಯವಾಗುತ್ತಿಲ್ಲ. ಇನ್ನು, ಈ ವ್ಯಕ್ತಿಗೆ 37 ಮಡಿದಿಯರೇ! ಎಂದು ಆಶ್ಚರ್ಯಪಟ್ಟಿದ್ದಾರೆ. ಈ ವಿಡಿಯೋಗೆ ಅನೇಕ ರೀತಿಯಲ್ಲಿ ತಮಾಷೆಯಾಗಿ ಕಮೆಂಟ್ಗಳು ಬಂದಿದೆ.
BRAVEST MAN….. LIVING
37th marriage in front of 28 wives, 135 children and 126 grandchildren.👇👇 pic.twitter.com/DGyx4wBkHY
— Rupin Sharma IPS (@rupin1992) June 6, 2021