Friday, August 19, 2022

Latest Posts

ಒಲಿಂಪಿಕ್ಸ್‌ಗೆ ಕೋವಿಡ್‌ನಿಂದ ಯಾವ ಆತಂಕವೂ ಇಲ್ಲ: ಜಾನ್ ಕೋಟ್ಸ್‌

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ಹೆಚ್ಚುತ್ತಿರುವ ಈ ಸಂದರ್ಭದಲ್ಲಿಒಲಿಂಪಿಕ್ಸ್ ನಡೆಸುವುದು ಬೇಕೇ ಬೇಡವೇ ಎಂಬ ಗೊಂದಲ ನಡುವೆ, ಜಗತ್ತಿನ ಯಾವ ಶಕ್ತಿಗೂ ಈ ಕ್ರೀಡಾಕೂಟವನ್ನು ರದ್ದು ಮಾಡಿಸುವ ಶಕ್ತಿ ಇಲ್ಲ ಎಂದು ಅಂತಾರಾಷ್ಟ್ರೀಯ ಒಲಿಂಪಕ್ ಸಮಿತಿಯ ಉಪಾಧ್ಯಕ್ಷ ಜಾನ್ ಕೋಟ್ಸ್‌ ಅಭಿಪ್ರಾಯಪಟ್ಟಿದ್ದಾರೆ.
ಸಿಡ್ನಿಯಲ್ಲಿ ಮಾತನಾಡಿದ ಅವರು, ಆಟಗಾರರ ಸುರಕ್ಷತೆಗಾಗಿ ಕೈಗೊಳ್ಳಬೇಕಾಗಿರುವ ಎಲ್ಲ ಮುಂಜಾಗ್ರತಾ ಕ್ರಮಗಳಿಗೆ ಸಂಬಂಧಿಸಿದ ಜಪಾನ್ ಪ್ರಧಾನಮಂತ್ರಿ ಯೊಶಿಹಿಡೆ ಸೂಗ ಅವರೊಂದಿಗೆ ಚರ್ಚಿಸಲಾಗಿದೆ ಎಂದು ವಿವರಿಸಿದರು.
ಜುಲೈ 23ರಂದು ಆರಂಭವಾಗುವ ಒಲಿಂಪಿಕ್ಸ್ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೊತೆ ಸೂಗ ಅವರು ಏಪ್ರಿಲ್‌ನಲ್ಲಿ ಮಾತುಕತೆ ನಡೆಸಿದ್ದು, ಕೋವಿಡ್‌ ನಿಯಂತ್ರಿಸಲು ಮತ್ತು ಕ್ರೀಡಾಪಟುಗಳಿಗೆ ಸೋಂಕು ತಗುಲದಂತಿರಲು ಸಕಲ ಸಿದ್ಧತೆಗಳನ್ನು ಮಾಡಲಾಗಿದ್ದು ಸುರಕ್ಷಿತವಾಗಿ ಒಲಿಂಪಿಕ್ಸ್ ಆಯೋಜಿಸಲು ಬದ್ಧರಾಗಿರುವುದಾಗಿ ಸೂಗ ಭರವಸೆ ನೀಡಿದ್ದಾರೆ.
ಟೋಕಿಯೊ ಸೇರಿದಂತೆ ಜಪಾನ್‌ನ ವಿವಿಧ ಭಾಗಗಳಲ್ಲಿ ವೈರಸ್ ಸೃಷ್ಟಿಸಿರುವ ಆತಂಕದಿಂದಾಗಿ ತುರ್ತು ಪರಿಸ್ಥಿತಿಯನ್ನು ಹೇರಿರುವ ಹಿನ್ನೆಲೆಯಲ್ಲಿ ಕೂಟವನ್ನು ನಡೆಸುವ ಬಗ್ಗೆ ಸಂದೇಹಗಳು ಎದ್ದಿವೆ. ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಕೋಟ್ಸ್‌ ‘ಒಲಿಂಪಿಕ್ಸ್‌ಗೆ ಕೋವಿಡ್‌ನಿಂದ ಯಾವ ಆತಂಕವೂ ಇಲ್ಲ’ ಎಂದರು.
ಕೋವಿಡ್ ಹಿನ್ನೆಲೆಯಲ್ಲಿ ಒಲಿಂಪಿಕ್ಸ್‌ಗೆ ಸಂಬಂಧಿಸಿದ ಕೆಲವು ಪ್ರಾಯೋಗಿಕ ಸ್ಪರ್ಧೆಗಳು ಮತ್ತು ಅರ್ಹತಾ ಟೂರ್ನಿಗಳನ್ನು ಮುಂದೂಡಲಾಗಿದೆ. ಕೆಲವು ರದ್ದಾಗಿವೆ. ಇನ್ನು ಕೆಲವು ಬೇರೆ ದೇಶಗಳಿಗೆ ಸ್ಥಳಾಂತರಗೊಂಡಿವೆ. ಆದರೆ ಕೆಲವು ಸ್ಪರ್ಧೆಗಳು, ವಿಶೇಷವಾಗಿ ಡೈವಿಂಗ್ ವಿಶ್ವಕಪ್‌ ಟೋಕಿಯೊದಲ್ಲಿ ಯಶಸ್ವಿಯಾಗಿ ನಡೆದಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!