ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಸಂವಿಧಾನ ದಿನ, ಈ ಹಿನ್ನೆಲೆಯಲ್ಲಿ ನಮ್ಮ ಸಂವಿಧಾನದ ಬಗ್ಗೆ ನಮಗೆ ಗೊತ್ತಿಲ್ಲದ ಕೆಲವು ಸಂಗತಿಗಳನ್ನು ತಿಳಿದುಕೊಳ್ಳಬೇಕು. ಸಂವಿಧಾನದ ಮೂಲ ಪ್ರತಿಯಲ್ಲಿ ರಾಮ, ಸೀತೆ, ಲಕ್ಷ್ಮಣರ ಚಿತ್ರಗಳಿತ್ತು ಎಂಬುದು ನಿಮಗೆ ತಿಳಿದಿದೆಯೇ? ಹೌದು, ನಮ್ಮ ಭಾರತೀಯ ಸಂವಿಧಾನದ ಮೂಲ ಪ್ರತಿಯಲ್ಲಿ ಈ ದೇಶವನ್ನಾಳಿದ ಆದರ್ಶಪುರುಷ, ಪ್ರಭು ಶ್ರೀರಾಮಚಂದ್ರ, ಸೀತಾಮಾತೆಯರ ಚಿತ್ರಗಳನ್ನು ಚಿತ್ರಿಸಲಾಗಿದೆ.
ಈ ಕುರಿತು ಲೋಕಸಭಾ ಸದಸ್ಯ ಹಾಗು ಮಾಜಿ ಕೇಂದ್ರ ಸಚಿವರಾಗಿರುವ ರವಿಶಂಕರ್ ಪ್ರಸಾದ್ ಅವರು ಟ್ವೀಟ್ ಒಂದನ್ನು ಮಾಡಿ ಈ ವಿಷಯವನ್ನು ಹಂಚಿಕೊಂಡಿದ್ದರು.
ಭಾರತದ ಸಂವಿಧಾನದ ಮೂಲ ದಾಖಲೆಯಲ್ಲಿ ಭಗವಾನ್ ರಾಮ, ಮಾತೆ ಸೀತೆ ಮತ್ತು ಲಕ್ಷ್ಮಣರು ಲಂಕೆಯ ರಾವಣನನ್ನು ಸೋಲಿಸಿದ ನಂತರ ಅಯೋಧ್ಯೆಗೆ ಹಿಂದಿರುಗುವ ಸುಂದರವಾದ ರೇಖಾಚಿತ್ರವನ್ನು ಹೊಂದಿದೆ. ಇದು ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ ಅಧ್ಯಾಯದ ಆರಂಭದಲ್ಲಿ ಲಭ್ಯವಿದೆ.