ಫ್ಲೈಟ್ ಮಿಸ್ ಆಗುವ ಭಯಕ್ಕೆ ಬಾಂಬ್ ಇದೆ ಎಂದು ಕರೆ ಮಾಡಿದ ಪ್ರಯಾಣಿಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಮಾನ ನಿಲ್ದಾಣಕ್ಕೆ ಲೇಟಾಗಿ ಬಂದು, ಇನ್ನೇನು ಫ್ಲೈಟ್ ಮಿಸ್ ಆದೀತು ಅನ್ನೋ ಭಯಕ್ಕೆ ವಿಮಾನದಲ್ಲಿ ಬಾಂಬ್ ಇದೆ ಎಂದು ಪ್ರಯಾಣಿಕ ಕರೆ ಮಾಡಿದ್ದಾರೆ. ಹೈದರಾಬಾದ್‌ನಲ್ಲಿ ತಪಾಸಣೆ ಬಳಿಕ ಇದು ಹುಸಿ ಬಾಂಬ್ ಕರೆ ಎಂದು ತಿಳಿದಿದ್ದು, ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ.

ಹೈದರಾಬಾದ್‌ನಿಂದ ಚೆನ್ನೈಗೆ ಹೊರಟಿದ್ದ ವಿಮಾನದಲ್ಲಿ 118 ಜನರಿದ್ದರು. ತಪಾಸಣೆ ವೇಳೆ ಇದ್ದಕ್ಕಿದ್ದಂತೆಯೇ ವಿಮಾನ ನಿಲ್ದಾಣ ಸಿಬ್ಬಂದಿಗೆ ಕರೆ ಬಂದಿದೆ, ಆತಂಕದಿಂದ ಸಿಬ್ಬಂದಿ ಇಡೀ ವಿಮಾನವನ್ನು ಜಾಲಾಡಿದ್ದಾರೆ. ತಕ್ಷಣ ವಿಮಾನ ನಿಲ್ದಾಣಕ್ಕೆ ಬಾಂಬ್ ಪತ್ತೆ ದಳವನ್ನು ಕರೆಸಿ, ವಿಮಾನದಿಂದ ಎಲ್ಲರನ್ನು ಇಳಿಸಿ ತಪಾಸಣೆ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!