ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇವೀರಮ್ಮನ ಬೆಟ್ಟದಲ್ಲಿ ದೇವರ ದರ್ಶನ ಪಡೆದು ಬೆಟ್ಟ ಇಳಿಯುತ್ತಿದ್ದಾಗ ಯುವತಿಯೊಬ್ಬಳು ಕಾಲು ಉಳುಕಿ ಪ್ರಜ್ಞೆ ತಪ್ಪಿದ ಘಟನೆ ನಡೆದಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಯುವತಿಯನ್ನು ಬೆಟ್ಟದ ತುದಿಯಿಂದ ಕರೆತಂದು ಆಸ್ಪತ್ರೆಗೆ ಕರೆದೊಯ್ದರು.
ಬೇಲೂರು ತಾಲೂಕಿನ ಎಂಸಂದಿ ಗ್ರಾಮದ ಸಿಂಧು (25) ಎಂಬ ಯುವತಿ ಮಾಣಿಕ್ಯಧಾರಾದಿಂದ ದೇವಿಯ ದರ್ಶನ ಪಡೆದು ಬೆಟ್ಟವನ್ನು ಇಳಿಯುತ್ತಿದ್ದಳು. ಈ ವೇಳೆ ಯುವತಿಗೆ ಪ್ರಜ್ಞೆ ತಪ್ಪಿದೆ. ಯುವತಿಯನ್ನು ಆಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.
ಸಹಸ್ರಾರು ಭಕ್ತರು ಮಳೆ, ಜಾರಿಕೆ ಮಧ್ಯೆಯೂ ಹಗ್ಗ ಹಿಡಿದು ದೇವೀರಮ್ಮನ ಬೆಟ್ಟ ಹತ್ತುತ್ತಿದ್ದಾರೆ. ಈ ಬಾರಿ ಬೆಟ್ಟ ಹತ್ತಲು ಭಕ್ತರು ನಾನಾ ತೊಂದರೆಗಳನ್ನು ಎದುರಿಸುತ್ತಿದ್ದಾರೆ.