spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬಂಧನದಿಂದ ಬಚಾವ್ ಆಗಲು ಪೊಲೀಸರಿಗೆ 25 ಲಕ್ಷ ರೂ. ಲಂಚ?: ಹೊರಬಿತ್ತು ರಾಜ್‌ ಕುಂದ್ರಾ ಕುರಿತ ಮತ್ತೊಂದು ಸ್ಫೋಟಕ ಮಾಹಿತಿ!

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಅಶ್ಲೀಲ ಚಿತ್ರಗಳ ನಿರ್ಮಾಣಕ್ಕೆ ಸಂಬಂಧಿಸಿ ಈಗಾಗಲೇ ಬಂಧನಕ್ಕೆ ಒಳಗಾಗಿರುವ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಉದ್ಯಮಿ ರಾಜ್‌ ಕುಂದ್ರಾ ಕುರಿತ ಮತ್ತೊಂದು ಸ್ಫೋಟ ಮಾಹಿತಿ ಹೊರಬರುತ್ತಿದೆ.
ಹೌದು, ಹಲವಾರು ಸಂಸ್ಥೆ ಹೆಸರಿನಲ್ಲಿ ಬ್ಲೂ ಫಿಲ್ಮ್‌ ತಯಾರಿಸಿ ಹೊರದೇಶಗಳಲ್ಲಿ ಮಾರಾಟ ಮಾಡುತ್ತಿದ್ದ ರಾಜ್‌ ಕುಂದ್ರಾ, ಅದರ ನೇರ ಪ್ರಸಾರಕ್ಕೆ ಅವಕಾಶ ಕಲ್ಪಿಸಲು ತಯಾರಿ ನಡೆಸಿರುವ ಮಾಹಿತಿ ಪೊಲೀಸರಿಗೆ ತಿಳಿದಿದ್ದು, ಅಷ್ಟರಲ್ಲಿಯೇ ಅವರು ಬಂಧನಕ್ಕೆ ಒಳಗಾಗಿದ್ದಾರೆ.
ಇನ್ನು ತನ್ನ ಮೇಲೆ ಪೊಲೀಸರಿಗೆ ಅನುಮಾನ ಮೂಡುತ್ತಲೇ ಅವರು ತಮ್ಮನ್ನು ಬಂಧಿಸಬಾರದು ಎನ್ನುವ ಕಾರಣಕ್ಕೆ ಮುಂಬೈನ ಕ್ರೈಂ ಬ್ರ್ಯಾಂಚ್ ಪೊಲೀಸರಿಗೆ 25 ಲಕ್ಷ ರೂ. ಲಂಚ ನೀಡಿದ್ದರು ಎನ್ನುವ ಮಾಹಿತಿ ಸಿಕ್ಕಿದೆ.
ಅಮೆರಿಕ ಮೂಲದ ಕಂಪೆನಿಯ ಒಡೆಯ, ಬ್ಲೂ ಫಿಲ್ಮ್‌ ಪ್ರಕರಣದ ಆರೋಪಿ ಅರವಿಂದ ಶ್ರೀವಾಸ್ತವ ಅಲಿಯಾಸ್ ರಾಶ್ ಠಾಕೂರ್ ಹಾಗೂ ಪೊಲೀಸ್ ನಡುವೆ ಹಣ ವರ್ಗಾವಣೆ ಆಗಿರುವ ಕುರಿತು ಮಾರ್ಚ್ ನಲ್ಲಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಇಮೇಲ್ ಮೂಲಕ ದೂರು ನೀಡಿದ್ದರು. ಈ ಮೇಲ್ ನಲ್ಲಿ ಲಂಚದ ಕುರಿತಾದ ವಾಟ್ಸಾಪ್ ನ ಸ್ಕ್ರೀನ್ ಶಾಟ್ ಗಳಿದ್ದವು ಎಂದು ವರದಿಗಳು ತಿಳಿಸಿವೆ. ಆದರೆ ಇದರ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಮುಂಬೈ ಪೊಲೀಸ್ ಅಧಿಕೃತ ವಕ್ತಾರ ಡಿಸಿಪಿ ಚೈತನ್ಯ ಎಸ್ ತಿಳಿಸಿದ್ದಾರೆ.
ಶ್ರೀವಾಸ್ತವ ಅಮೆರಿಕ ಮೂಲದ ಕಂಪನಿಯ ಹೊಂದಿದ್ದು, ಕಳೆದ ಮಾರ್ಚ್‌ನಲ್ಲಿ ಈ ಪ್ರಕರಣ ಹೊರಬೀಳುತ್ತಲೇ ಪೊಲೀಸ್ ಇಲಾಖೆ ಈತನ ಹೆಸರಿನಲ್ಲಿ ಎರಡು ಬ್ಯಾಂಕ್ ಅಕೌಂಟ್‌ಗಳಲ್ಲಿ 4.50 ಕೋಟಿ ರೂ. ಹಣವನ್ನು ಜಪ್ತು ಮಾಡಿತ್ತು ಎನ್ನಲಾಗಿದೆ. ಈ ಲಂಚ ಪ್ರಕರಣದ ಕುರಿತೂ ಇನ್ನಷ್ಟೇ ತನಿಖೆ ಆಗಬೇಕಿದ್ದು, ಇನ್ನು ಎಷ್ಟು ಹುಳುಕುಗಳು ಹೊರಬರುತ್ತವೆ, ಇದಕ್ಕೆ ಯಾರ್ಯಾರು ಶಾಮೀಲಾಗಿದ್ದಾರೆ ಎನ್ನುವುದು ನೋಡಬೇಕಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss