Thursday, August 11, 2022

Latest Posts

ದುಷ್ಟಶಕ್ತಿಗಳ ಮಟ್ಟ ಹಾಕಲು ಪೊಲೀಸರಿಗೂ ಆಧುನಿಕ ಶಸ್ತ್ರಾಸ್ತ್ರ ನೀಡಲಾಗಿದೆ: ಗೃಹ ಸಚಿವ ಅರಗ ಜ್ಞಾನೇಂದ್ರ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ದಿಗಂತ ವರದಿ ಬೆಳಗಾವಿ :

ದುಷ್ಟ ಶಕ್ತಿಗಳ ಮಟ್ಟ ಹಾಕಲು ಪೊಲೀಸರಿಗೂ ಆಧುನಿಕ ಶಸ್ತ್ರಾಸ್ತ್ರ ಸರ್ಕಾರ ನೀಡದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.
ಬುಧವಾರ ನಗರದ ಕಂಗ್ರಾಳಿಯ ಕೆಎಸ್ ಆರ್ ಪಿಯ ಆವರಣದಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ತರಬೇತಿ ಶಾಲೆಯ ಮೊದಲನೇ ತಂಡದ 171 ಸಶಸ್ತ್ರ ಪೊಲೀಸ್ ಕಾನ್ಸಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದ ಹೊರಗಿನ ದುಷ್ಟಶಕ್ತಿಗಳಿಗಿಂತ ದೇಶದ ಒಳಗಿರುವ ದುಷ್ಟಶಕ್ತಿಗಳು ಅಪಾಯಕಾರಿ.
ಆಧುನಿಕ ಉಪಕರಣ ಬಳಸಿ ಶಾಂತಿ ಸುವ್ಯವಸ್ಥೆ ಹದಗೆಡಿಸುತ್ತಿದ್ದು ನಮ್ಮ ಪೊಲೀಸರಿಗೂ ಆಧುನಿಕ ಶಸ್ತ್ರಾಸ್ತ್ರ ನೀಡಿ ಅಪರಾಧ ಚಟುವಟಿಕೆ ಮಟ್ಟ ಹಾಕುವ ಕೆಲಸ ಸರ್ಕಾರ ಮಾಡಿದೆ ಎಂದರು.
ನಮ್ಮ ದೇಶದ ಗಡಿಯಲ್ಲಿ ಸೈನಿಕರು ಮಾಡುವ ಕೆಲಸವನ್ನು ಇಲ್ಲಿ ದೇಶದ ಒಳಗಿನ ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡುವ ಇವರು ಸೈನಿಕರಾಗಿದ್ದಾರೆ ಎಂದರು.
ಸ್ವಾತಂತ್ರ್ಯ ನಂತರ ಬ್ರಿಟಿಷರು ನಮಗೆ ಆಡಳಿತ ಇರುವುದಿಲ್ಲ ಎಂಬ ಕುಹಕ ಮಾತುಗಳನ್ನಾಡಿದ್ದರು. ಆದರೆ ನಮ್ಮ ಭಾರತ ಯಾವುದಕ್ಕೂ ಕಡಿಮೆ ಇಲದಂತೆ ಆಡಳಿತ ನಡೆಸಿ ಜಗತ್ತಿನ ಗಮನ ಸೆಳೆದಿದೆ ಎಂದರು.
ಈಗ ತರಬೇತಿ ಪಡೆದು ಹೊರ ಹೋಗುತ್ತಿರುವ 171 ಜನರಲ್ಲಿ ಎಸ್ ಎಸ್ ಎಲ್ ಸಿ- 10, ಪಿಯುಸಿ – 34, ಪದವಿ – 85, ಸ್ನಾತಕೋತ್ತರ – 18, ಇಂಜಿನಿಯರಿಂಗ್ – 12, ಡಿಪ್ಲೊಮ, 4 ಐಟಿಐ – 8 ಜನ ಅಧ್ಯಯನ ನಡೆಸಿದವರಾಗಿದ್ದಾರೆ. ಉತ್ತಮ ವಿದ್ಯಾಭ್ಯಾಸ ಪಡೆದವರು ಇಲಾಖೆಗೆ ಬಂದಿದ್ದು ದೇಶ ಭಕ್ತಿ ಹಾಗೂ ಪ್ರಾಮಾಣಿಕ ಕೆಲಸ ಮಾಡಿ ನಮ್ಮ ಇಲಾಖೆ ಗೌರ ಹೆಚ್ಚಿಸಬೇಕು ಎಂದು ಗೃಹ ಸಚಿವ ಜ್ಞಾನೇಂದ್ರ ಕಿವಿ ಮಾತು ಹೇಳಿದರು.
ಶಾಸಕ ಅನಿಲ ಬೆನಕೆ, ಕೆಎಸ್ ಆರ್ ಪಿ ಎಡಿಜಿಪಿ ಅಲೋಕಕುಮಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss