ಆರಾಮವಾಗಿ ಸೈಕಲ್ ತುಳಿಯುತ್ತ ಹೊರಟ ಡೆನ್ಮಾರ್ಕ್‌- ಫ್ರಾನ್ಸ್‌ ಅಧ್ಯಕ್ಷರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಾಮಾನ್ಯವಾಗಿ ದೇಶದ ಅಧ್ಯಕ್ಷ ಅಥವಾ ಪ್ರಧಾನ ಮಂತ್ರಿ ಅಂದಾಗ ಅವರಿಗೆ ಎಷ್ಟು ರಕ್ಷಣೆ ಇದ್ದರೂ ಸಾಲದು. ಅವರು ಹೋಗುವ ದಾರಿ ಉದ್ದಕ್ಕೂ ಹೈ ಅಲರ್ಟ್ ಇರುತ್ತೆ. ಇನ್ನು ಅವರು ಸಂಚರಿಸುವ ವಾಹನ ಅನೇಕ ಭದ್ರತಾ ಆಧಾರಿತವಾಗಿರುತ್ತದೆ.

ಆದ್ರೆ ಇಲ್ಲಿ ಡೆನ್ಮಾರ್ಕ್‌ ಹಾಗೂ ಫಾನ್ಸ್‌ ಅಧ್ಯಕ್ಷರು ಅವರು ಯಾವ ರೀತಿ ಸಂಚರಿಸಿದ್ರು ಅಂತ ಒಮ್ಮೆ ನೀವೇ ನೋಡಿ…

ಫ್ರಾನ್ಸ್‌ ಅಧ್ಯಕ್ಷ ಎಮ್ಯಾನ್ಯುಯೆಲ್ ಮ್ಯಾಕ್ರನ್‌ ಹಾಗೂ ಆಗ ಡೆನ್ಮಾರ್ಕ್‌ ಪ್ರಧಾನಿ ಆಗಿದ್ದ ಲಾರ್ಸ್‌ ಲೊಕ್ಕೆ ರಾಸ್ಮುಸ್ಸೇನ್‌ ಸೈಕಲ್‌ನಲ್ಲಿ ಸಂಚಾರ ಆರಂಭಿಸುತ್ತಾರೆ. ಇಬ್ಬರೂ ಸೈಕಲ್‌ನಲ್ಲಿ ತೆರಳುವಾಗಲೇ ಪರಸ್ಪರ ಮಾತನಾಡಿಕೊಂಡು ಉಭಯ ದೇಶಗಳ ಬಗ್ಗೆ ಚರ್ಚೆ ಆರಾಮವಾಗಿ ಹೋಗುತ್ತಾರೆ.

ಸಾಕಷ್ಟು ದೂರ ಸೈಕಲ್‌ನಲ್ಲಿ ಪ್ರಯಾಣಿಸಿದ ನಂತರ ಸೈಕಲ್‌ನಿಂದ ಇಳಿದು, ಎಮ್ಯಾನ್ಯುಯೆಲ್‌ ಅವರು ರಾಸ್ಮುಸ್ಸೇನ್‌ ಅವರಿಗೆ ಟಿ-ಶರ್ಟ್‌ ಒಂದನ್ನು ಉಡುಗೊರೆಯಾಗಿ ನೀಡುತ್ತಾರೆ. ಖುಷಿಯಿಂದ ಇಬ್ಬರು ಗಣ್ಯರು ಅಪ್ಪಿಕೊಳ್ಳುತ್ತಾರೆ.

 

ಆದ್ರೆ ಇದು ಈಗಿನ ವಿಡಿಯೋ ಅಲ್ಲ. ಬದಲಾಗಿ 2018ರಲ್ಲಿ ಎಮ್ಯಾನ್ಯುಯೆಲ್‌ ಅವರು ಡೆನ್‌ಮಾರ್ಕ್‌ಗೆ ಭೇಟಿ ಕೊಟ್ಟಾಗಿನ ಘಟನೆ ಇದಾಗಿದ್ದು, ಇದೀಗ ವೈರಲ್ ಆಗಿದೆ.

ಈ ದೃಶ್ಯವನ್ನು ಭಾರತದ ಹರ್ಷ್‌ ಗೊಯೆಂಕಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!