ಯಪ್ಪಾ… ಒಂದು ಬಾಳೆಗೊನೆ ಬೆಲೆ ಬರೋಬ್ಬರಿ ಒಂದು ಲಕ್ಷ ರೂಪಾಯಿ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಂದು ಬಾಳೆಹಣ್ಣಿನ ಗೊನೆಯ ಬೆಲೆ ಎಷ್ಟಿರಬಹುದು? ತಲೆಯಲ್ಲಿ ಒಂದು ಸಂಖ್ಯೆ ಹೊಳೆಯಿತಾ… ಅದು ತಪ್ಪು!! ಇಲ್ಲೊಂದು ಬಾಳೆಗೊನೆ ಬರೋಬ್ಬರಿ ಒಂದು ಲಕ್ಷ ರೂ.ಗಳಿಗೆ ಮಾರಾಟವಾಗಿದೆ. ಈ ಘಟನೆ ನಡೆದಿರುವುದು ಕೇರಳದ ಚಾಲಕುಡಿ ನಗರಸಭೆಯಲ್ಲಿ.

ಇಲ್ಲಿ ನಡೆದ ಹರಾಜು ಪ್ರಕ್ರಿಯೆ ಈ ದಾಖಲೆಯನ್ನು ಇತಿಹಾಸ ಪುಟಗಳಲ್ಲಿ ದಾಖಲಿಸಿತು. ನಗರಸಭೆ ಉದ್ಯೋಗಿಗಳ ಸಂಘಟನೆ ಸಿಐಆರ್‌ಸಿ ನೇತೃತ್ವದಲ್ಲಿ ನಡೆದ ಈ ಹರಾಜಿನಲ್ಲಿ 500 ರೂ.ಗೆ ಬಿಡ್ಡಿಂಗ್ ಆರಂಭಗೊಂಡಿತು. ಅದು ಅಂತಿಮವಾಗಿ ತಲುಪಿದ್ದು, ಒಂದು ಲಕ್ಷ ರೂ.ಗಳಿಗೆ!

ಮಹಾನಗರ ಪಾಲಿಕೆಯ ಸುವರ್ಣ ಮಹೋತ್ಸವದ ಅಂಗವಾಗಿ ಸುವರ್ಣ ಸ್ಪರ್ಶ ಲೋಕೋಪಕಾರ ಯೋಜನೆಗೆ ಹಣ ಸಂಗ್ರಹಿಸಲು ಈ ಹರಾಜು ಆಯೋಜಿಸಲಾಗಿತ್ತು. ಇದರಲ್ಲಿ ಬರುವ ಹಣವನ್ನು ನಿರ್ಗತಿಕ ರೋಗಿಗಳ ಚಿಕಿತ್ಸೆಗೆ ಬಳಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!