ಅವಧಿ ಪೂರ್ಣಕ್ಕೂ ಮುನ್ನ ರಾಜೀನಾಮೆ ಘೋಷಿಸಿದ ನ್ಯೂಜಿಲೆಂಡ್ ಪ್ರಧಾನಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅವಧಿ ಪೂರ್ಣಕ್ಕೂ ಮುನ್ನವೇ ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡರ್ನ್ ಅವರು ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.

ರಾಜೀನಾಮೆ ನೀಡಲು ಇದು ಸೂಕ್ತ ಸಮಯ ಎಂದು ತಮ್ಮ ಲೇಬರ್ ಪಕ್ಷದ ಸಭೆಯಲ್ಲಿ ಹೇಳಿದ್ದಾರೆ. ಮುಂದಿನ ಚುನಾವಣೆಯನ್ನು ನಮ್ಮ ಪಕ್ಷವೇ ಗೆಲ್ಲುತ್ತದೆ ಎನ್ನುವ ಭರವಸೆ ಇದೆ ಎಂದು ಪ್ರಧಾನಿ ಜಸಿಂಡಾ ಹೇಳಿದ್ದಾರೆ.

ರಾಜೀನಾಮೆಗೆ ಯಾವುದೇ ಒತ್ತಡ ಇಲ್ಲ, ಇದು ನನ್ನದೇ ನಿರ್ಧಾರ, ದೇಶವನ್ನು ಮುನ್ನಡೆಸುವುದು ಅತ್ಯಂತ ವಿಶೇಷವಾದ ಕೆಲಸ ಜೊತೆಗೆ ಸವಾಲನ್ನು ಎದುರಿಸಬೇಕಾಗುತ್ತದೆ. ಅನಿರೀಕ್ಷಿತ ಸಂದರ್ಭಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿರಬೇಕು. ಫೆಬ್ರವರಿ 7 ರ ಒಳಗೆ ನನ್ನ ಅವಧಿ ಕೊನೆಗೊಂಡು, ಹೊಸ ಅಧ್ಯಕ್ಷ ಪ್ರಧಾನಿ ಸ್ಥಾನ ಅಲಂಕರಿಸುತ್ತಾರೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!