ಸೈಬರ್‌ ಭದ್ರತೆಯ ಸವಾಲು ಎದುರಿಸಲು ಪರಸ್ಪರ ಸಹಕಾರಕ್ಕೆ ಬದ್ಧವೆಂದ ಕ್ವಾಡ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಭಾರತ, ಯುನೈಟೆಡ್ ಸ್ಟೇಟ್ಸ್, ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳನ್ನೊಳಗೊಂಡ ಕ್ವಾಡ್‌ ಗುಂಪಿನ ನಾಯಕರು ಪ್ರಾದೇಶಿಕ ಸೈಬರ್ ಮೂಲಸೌಕರ್ಯದ ಭದ್ರತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಖಾತ್ರಿಪಡಿಸುವಲ್ಲಿ ಪರಸ್ಪರ ಸಹಾಯ ಮಾಡಲು ಶನಿವಾರ ಪ್ರತಿಜ್ಞೆ ಮಾಡಿದ್ದಾರೆ.

ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನೇಪಥ್ಯದಲ್ಲಿ ಸಭೆ ನಡೆಸಿದ ನಾಲ್ಕು ದೇಶಗಳ ನಾಯಕರು ಈ ವಿಷಯದ ಕುರಿತು ಜಂಟಿ ಹೇಳಿಕೆಯನ್ನು ನೀಡಿದ್ದಾರೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ಅವರ ಸಹವರ್ತಿಗಳಾದ ಆಸ್ಟ್ರೇಲಿಯಾದ ಪೆನ್ನಿ ವಾಂಗ್, ಜಪಾನ್‌ನ ಹಯಾಶಿ ಯೋಶಿಮಾಸಾ ಮತ್ತು ಯುಎಸ್ ವಿದೇಶಾಂಗ ಕಾರ್ಯದರ್ಶಿ ಟೋನಿ ಬ್ಲಿಂಕೆನ್ ಅವರು ತಮ್ಮ ಪ್ರದೇಶದೊಳಗೆ ಹೊರಹೊಮ್ಮುವ ʼransomwareʼ ಕಾರ್ಯಾಚರಣೆಗಳನ್ನು ಪರಿಹರಿಸಲು ಸಮಂಜಸವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕರೆ ನೀಡಿದ್ದಾರೆ.

ಇಂಡೋ-ಪೆಸಿಫಿಕ್ ರಾಷ್ಟ್ರಗಳ ಸೈಬರ್ ಸಾಮರ್ಥ್ಯಗಳನ್ನು ಹೆಚ್ಚಿಸುವ ಕೇಂದ್ರೀಕೃತ ಉಪಕ್ರಮಗಳು ಪ್ರಾದೇಶಿಕ ಸೈಬರ್‌ಇನ್‌ಫ್ರಾಸ್ಟ್ರಕ್ಚರ್‌ನ ಭದ್ರತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಖಚಿತಪಡಿಸಲು ಪರಸ್ಪರರ ಸಹಾಯ ಸಹಕಾರಕ್ಕೆ ಬದ್ಧವಾಗಿರುವುದಾಗಿ ಅವರ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

“ransomware ನ ಸ್ವಭಾವವು ನಮ್ಮ ರಾಷ್ಟ್ರೀಯ ಭದ್ರತೆ, ಹಣಕಾಸು ವಲಯ ಮತ್ತು ವ್ಯಾಪಾರ ಉದ್ಯಮ, ನಿರ್ಣಾಯಕ ಮೂಲಸೌಕರ್ಯ ಮತ್ತು ವೈಯಕ್ತಿಕ ಡೇಟಾದ ರಕ್ಷಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಆದ್ದರಿಂದ ransomware ಅನ್ನು ಎದುರಿಸುವಲ್ಲಿಇಂಡೋ-ಪೆಸಿಫಿಕ್ ಪಾಲುದಾರರಲ್ಲಿ ಪ್ರಾಯೋಗಿಕ ಸಹಕಾರವು ಈ ಪ್ರದೇಶದಲ್ಲಿ ಹೆಚ್ಚಿನ ಸೈಬರ್‌ ಭದ್ರೆತೆಗೆ ಅನುವು ಮಾಡಿಕೊಡಲಿದೆ ಎಂದಿದ್ದಾರೆ.

ಇಂಡೋ-ಪೆಸಿಫಿಕ್ ಆರ್ಥಿಕ ಅಭಿವೃದ್ಧಿ ಮತ್ತು ಭದ್ರತೆಗೆ ಅಡಚಣೆಯಾಗಿರುವ ransomware ನ ಜಾಗತಿಕ ಬೆದರಿಕೆಯನ್ನು ಪರಿಹರಿಸಲು ತಾವು ಬದ್ಧರಾಗಿದ್ದೇವೆ ಎಂದು ಸಚಿವರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!