Wednesday, August 10, 2022

Latest Posts

ಮದುವೆ ಸಮಾರಂಭದಲ್ಲಿ ಸುರಿಯಿತು ದುಡ್ಡಿನ ಮಳೆ: ಹಣ ಹೆಕ್ಕಲು ಮುಗಿಬಿದ್ದ ಅತಿಥಿಗಳು

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಮದುವೆ ಸಮಾರಂಭದಲ್ಲಿ ಹೆಲಿಕಾಪ್ಟರ್​ ಮೂಲಕ  ಅತಿಥಿಗಳ ಮೇಲೆ ಹೂವಿನ ಜೊತೆ ಹಣದ ಮಳೆ ಸುರಿಸಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದ್ದು, ನೆಟ್ಟಿಗರೂ ವಿಡಿಯೋ ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ.

ಹೌದು… ಈ ಘಟನೆ ನಡೆದಿರುವುದು ಪಾಕಿಸ್ತಾನದ ಪಂಜಾಬ್​ ಪ್ರಾಂತ್ಯದ ಮಂಡಿ ಬಹೌದ್ದೀನ್ ಏರಿಯಾದಲ್ಲಿ. ವಿದೇಶದಲ್ಲಿ ನೆಲೆಸಿರುವ ವರನ ತಮ್ಮ ಅಣ್ಣನ ಮದುವೆ ಸಮಾರಂಭಕ್ಕಾಗಿ ಹೆಲಿಕ್ಯಾಪ್ಟರ್ ನ್ನು ಬಾಡಿಗೆಗೆ ಪಡೆದಿದ್ದ. ಮದುವೆ ನಡೆಯುತ್ತಿದ್ದ ವೇಳೆ ಹೆಲಿಕ್ಯಾಪ್ಟರ್ ಮೂಲಕ ಹೂವಿನ ಜೊತೆಗೆ ನೋಟಿನ ಮಳೆಯನ್ನು ವಧು-ವರ ಸೇರಿದಂತೆ ಅತಿಥಿಗಳ ಮೇಲೆ ಸುರಿಸಿದ್ದಾರೆ.

ನೋಟು ಬೀಳುತ್ತಿದ್ದಂತೆಯೇ ಅತಿಥಿಗಳೆಲ್ಲರೂ ಹಣ ಸಂಗ್ರಹಿಸಲು ವಾಹನಗಳ ಮೇಲೆಲ್ಲ ಹತ್ತಿರುವುದು ಹಾಸ್ಯಾಸ್ಪದವಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಸಿಕ್ಕಾಪಟೆ ನಕ್ಕಿದ್ದಾರೆ.

ಇಂತಹ ಘಟನೆ ಪಾಕಿಸ್ತಾನದಲ್ಲಿ ಇದೇ ಮೊದಲೇನಲ್ಲ. ಈ ಹಿಂದೆ ಗುಜ್ರಾನ್​ವಾಲದ ಉದ್ಯಮಿಯೊಬ್ಬರು ತಮ್ಮ ಮಗನ ಮದುವೆ ಸಮಾರಂಭದಲ್ಲಿ ಡಾಲರ್​ ಮಳೆ ಸುರಿದಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss