ಭಾರತ-ಆಸ್ಟ್ರೇಲಿಯಾ ನಡುವಿನ ಸಂಬಂಧ ಸಿ, ಡಿ, ಇ ಮೀರಿದ್ದು: ಸಿಡ್ನಿಯಲ್ಲಿ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಮೆಗಾ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.

ನಾನು 2014ರಲ್ಲಿ ಇಲ್ಲಿಗೆ ಬಂದಾಗ, ಭಾರತೀಯ ಪ್ರಧಾನಿಗಾಗಿ ನೀವು 28 ವರ್ಷಗಳವರೆಗೆ ಕಾಯಬೇಕಾಗಿಲ್ಲ ಎಂದು ನಾನು ನಿಮಗೆ ಭರವಸೆ ನೀಡಿದ್ದೆ. ಹಾಗಾಗಿ, ನಾನು ಮತ್ತೊಮ್ಮೆ ಸಿಡ್ನಿಯಲ್ಲಿದ್ದೇನೆ ಎಂದರು.

ಇದೇ ವರ್ಷದಲ್ಲಿ, ಅಹಮದಾಬಾದ್‌ನಲ್ಲಿ ಭಾರತದ ನೆಲದಲ್ಲಿ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರನ್ನ ಸ್ವಾಗತಿಸುವ ಅವಕಾಶ ನನಗೆ ಸಿಕ್ಕಿತು. ಇಂದು ಅವರು ಇಲ್ಲಿ ‘ಲಿಟಲ್ ಇಂಡಿಯಾ’ ಗೇಟ್‌ವೇಗೆ ಅಡಿಪಾಯ ಹಾಕುವಲ್ಲಿ ನನ್ನೊಂದಿಗೆ ಸೇರಿಕೊಂಡಿದ್ದಾರೆ. ನಾನು ಅವರಿಗೆ ನನ್ನ ಕೃತಜ್ಞತೆಯನ್ನ ವ್ಯಕ್ತಪಡಿಸುತ್ತೇನೆ ಎಂದರು.

ಈ ಕಾರ್ಯಕ್ರಮ ಮೂಲಕ ಭಾರತೀಯ ಜನರೊಂದಿಗೆ ಸಂಪರ್ಕ ಸಾಧಿಸುತ್ತಿರುವುದು ಖುಷಿಕೊಟ್ಟಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಂಬಂಧವನ್ನ 3ಸಿ ವ್ಯಾಖ್ಯಾನಿಸಿದ ಸಮಯವಿತ್ತು, ಈ ಮೂರು ಕಾಮನ್‌ವೆಲ್ತ್, ಕ್ರಿಕೆಟ್ ಮತ್ತು ಕರಿ ಎಂದು ಪ್ರಧಾನಿ ಮೋದಿ ಹೇಳಿದರು.

ಇದು 3D- ಪ್ರಜಾಪ್ರಭುತ್ವ, ಡಯಾಸ್ಪೊರಾ ಮತ್ತು ಸ್ನೇಹ. ಅದು 3E ಆದಾಗ, ಅದು ಶಕ್ತಿ, ಆರ್ಥಿಕತೆ ಮತ್ತು ಶಿಕ್ಷಣದ ಬಗ್ಗೆ, ಆದರೆ ಸತ್ಯವೆಂದರೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಂಬಂಧದ ನಿಜವಾದ ಆಳವು ಈ C, D, E ಅನ್ನು ಮೀರಿದೆ. ಈ ಸಂಬಂಧದ ಪ್ರಬಲ ಮತ್ತು ದೊಡ್ಡ ಅಡಿಪಾಯ ವಾಸ್ತವವಾಗಿ ಪರಸ್ಪರ ನಂಬಿಕೆ ಮತ್ತು ಪರಸ್ಪರ ಗೌರವ ಮತ್ತು ಇದರ ಹಿಂದಿನ ನಿಜವಾದ ಕಾರಣ ಭಾರತೀಯ ಡಯಾಸ್ಪೊರಾ ಎಂದರು .

ಯೋಗ ನಮ್ಮನ್ನು ಬೆಸೆದಿದೆ
ನಮ್ಮ ಜೀವನಶೈಲಿ ವಿಭಿನ್ನವಾಗಿರಬಹುದು ಆದರೆ ಈಗ ಯೋಗ ಕೂಡ ನಮ್ಮನ್ನು ಬೆಸೆದಿದೆ. ನಾವು ಕ್ರಿಕೆಟ್‌ ನಿಂದಾಗಿ ದೀರ್ಘಕಾಲ ಸಂಪರ್ಕ ಹೊಂದಿದ್ದೇವೆ. ಆದರೆ ಈಗ ಟೆನಿಸ್ ಮತ್ತು ಸಿನಿಮಾ ಕೂಡಾ ನಮ್ಮನ್ನು ಪರಸ್ಪರ ಬೆಸೆಯುವ ಕೊಂಡಿಗಳಾಗಿವೆ.ನಾವು ವಿಭಿನ್ನ ರೀತಿಯಲ್ಲಿ ಆಹಾರವನ್ನು ತಯಾರಿಸುತ್ತೇವೆ,ಈಗ ಮಾಸ್ಟರ್​​ಶೆಫ್ ನಮ್ಮನ್ನು ಪರಸ್ಪರ ಬೆಸೆಯುತ್ತದೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸಂಬಂಧ ಗಟ್ಟಿಯಾಗಿದೆ. 2 ದೇಶಗಳ ಸಂಬಂಧ ಗಟ್ಟಿಯಾಗಿರಲು ಭಾರತೀಯರು ಕಾರಣ. ಜೈಪುರದ ಜಿಲೇಬಿ, ಸ್ವೀಟ್​ಗಳು ಆಸ್ಟ್ರೇಲಿಯಾದಲ್ಲೂ ಸಿಗುತ್ತದೆ. ಇಂದು ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುತ್ತಿದೆ, ಇಡೀ ಜಗತ್ತಿನಾದ್ಯಂತ ಭಾರತದ ಟ್ಯಾಲೆಂಟ್​ ಫ್ಯಾಕ್ಟರಿ ಇದೆ. ಮೊಬೈಲ್ ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ 2ನೇ ಸ್ಥಾನದಲ್ಲಿದೆ .ಆರ್ಥಿಕತೆಯಲ್ಲಿ ಭಾರತ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಭಾರತ ಇಡೀ ವಿಶ್ವವನ್ನು ಒಂದು ಪರಿವಾರದಂತೆ ನೋಡುತ್ತದೆ.ಬ್ರಿಸ್ಬೇನ್​ನಲ್ಲಿ ಹೊಸ ರಾಯಭಾರ ಕಚೇರಿ ತೆರೆಯುವುದಾಗಿ ಘೋಷಣೆ ಮಾಡಿದ ಮೋದಿ, ಆಸ್ಟ್ರೇಲಿಯಾದಲ್ಲಿರುವ ನೀವೆಲ್ಲರೂ ಭಾರತದ ರಾಯಭಾರಿಗಳು.ಭಾರತ-ಆಸ್ಟ್ರೇಲಿಯಾ ನಡುವೆ ಹಲವು ಒಪ್ಪಂದಗಳಿಗೆ ಸಹಿ ಹಾಕಿದ್ದೇವೆ ಎಂದಿದ್ದಾರೆ.

ನೀವೆಲ್ಲರೂ ಸಹ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನ ವಿಜೃಂಭಣೆಯಿಂದ ಆಚರಿಸಿದ್ದೀರಿ ಎಂದು ತಿಳಿದು ನನಗೆ ಸಂತೋಷವಾಗಿದೆ. ನಮ್ಮ ಕ್ರಿಕೆಟ್ ಸಂಬಂಧ 75 ವರ್ಷ ಪೂರೈಸಿದೆ. ಕ್ರಿಕೆಟ್ ಮೈದಾನದಲ್ಲಿ ಸ್ಪರ್ಧೆಯು ಹೆಚ್ಚು ಆಸಕ್ತಿಕರವಾಗಿರುತ್ತದೆ, ನಮ್ಮ ಮೈದಾನದ ಹೊರಗಿನ ಸ್ನೇಹವು ಆಳವಾಗಿರುತ್ತದೆ ಎಂದರು.

ಶೇನ್ ವಾರ್ನ್ ನೆನಪು
ಭಾರತದ ಯುವಕರನ್ನ ಉಲ್ಲೇಖಿಸಿದ ಪ್ರಧಾನಿ, ಭಾರತದಲ್ಲಿ ಸಾಮರ್ಥ್ಯದ ಕೊರತೆಯಿಲ್ಲ, ಸಂಪನ್ಮೂಲಗಳ ಕೊರತೆಯೂ ಇಲ್ಲ. ಇಂದು ವಿಶ್ವದ ಅತಿದೊಡ್ಡ ಮತ್ತು ಕಿರಿಯ ಪ್ರತಿಭೆ ಕಾರ್ಖಾನೆ ಭಾರತದಲ್ಲಿದೆ. ಕಳೆದ ವರ್ಷ ಶ್ರೇಷ್ಠ ಕ್ರಿಕೆಟಿಗ ಶೇನ್ ವಾರ್ನ್ ನಿಧನರಾದಾಗ ಆಸ್ಟ್ರೇಲಿಯಾದ ಜೊತೆಗೆ ಲಕ್ಷಾಂತರ ಭಾರತೀಯರು ಶೋಕ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು. ನಾವು ನಮ್ಮವರನ್ನೇ ಕಳೆದುಕೊಂಡಂತೆ ಆಯಿತು ಎಂದರು. ಇನ್ನು ನಮ್ಮ ಭಾರತವೂ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು ಎಂಬ ಕನಸು ನಿಮ್ಮೆಲ್ಲರಿಗೂ ಇತ್ತು. ನಿಮ್ಮ ಹೃದಯದಲ್ಲಿರುವ ಕನಸು ನನ್ನ ಹೃದಯದಲ್ಲೂ ಇದೆ ಎಂದು ಪ್ರಧಾನಿ ಮೋದಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!