ಶೋಯೆಬ್‌ ಮಲಿಕ್‌-ಸಾನಿಯಾ ಮಿರ್ಜಾ ದಂಪತಿ ಮದ್ಯೆ ಬಿರುಕು: ಮೌನ ಮುರಿದ ಪಾಕ್ ಕ್ರಿಕೆಟಿಗ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಪಾಕ್‌ ಕ್ರಿಕೆಟರ್ ಶೋಯೆಬ್‌ ಮಲಿಕ್‌ ಮತ್ತು ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ದಂಪತಿ ವಿಚ್ಛೇದನ ನೀಡುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿತ್ತು.

ಆದರೆ, ಕ್ರಿಕೆಟರ್‌ ಶೋಯೆಬ್‌ ಮಲಿಕ್‌ ಮಾತ್ರ ಸುದ್ದಿ ಹರಡುತ್ತಿರುವವ ವಿರುದ್ಧ ಗರಂ ಆಗಿದ್ದು, ನಮ್ಮನ್ನು ಸುಮ್ಮನೆ ಬಿಟ್ಟುಬಿಡಿ. ಅನಗತ್ಯ ಸುದ್ದಿಗಳನ್ನು ಹಬ್ಬಿಸಬೇಡಿ ಎಂಬುದಾಗಿ ಹೇಳಿದ್ದಾರೆ.

ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌ ಪತ್ರಿಕೆ ಜತೆ ಮಾತನಾಡುವ ವೇಳೆ ಅವರಿಗೆ 12  ವರ್ಷಗಳ ದಾಂಪತ್ಯ ಜೀವನದ ಕುರಿತು ಪ್ರಶ್ನೆ ಎದುರಾಗಿದೆ. ಅದರೆ, ಮಲಿಕ್‌ ಅದಕ್ಕೆ ಹೌದು ಅಥವಾ ಅಲ್ಲ ಎಂದಿಲ್ಲ. ಆದರೆ, ನಮ್ಮಿಬ್ಬರನ್ನು ಸುಮ್ಮನೆ ಬಿಟ್ಟುಬಿಡಿ ಎಂದಷ್ಟೇ ಕೋರಿಕೊಂಡಿದ್ದಾರೆ.
‘ಅದು ನಮ್ಮ ವೈಯಕ್ತಿಕ ವಿಚಾರ. ನನ್ನ ಹೆಂಡತಿ ಅಥವಾ ನಾನು ಇದಕ್ಕೆ ಯಾವುದೇ ಕಾರಣಕ್ಕೂ ಉತ್ತರ ಕೊಡುವುದಿಲ್ಲ. ನಮ್ಮನ್ನು ಸುಮ್ಮನೆ ಬಿಟ್ಟು ಬಿಡಿ ಎಂಬುದಾಗಿ ಅವರು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!