ಉಫ್… ಬಿಸಿಲ ಏಟಿಗೆ ಇಲ್ಲಿ ಬಂಡೆಯಂಥಾ ಬಂಡೆಯೇ ಸೀಳಾಗಿದೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೂರಾರು ವರ್ಷದಿಂದ ಒಂದೇ ರೀತಿ ಇರೋ ಬಂಡೆಗಳು ಸೀಳು ಬಿಡೋದು ಅಂದ್ರೆ? ಅದೆಲ್ಲಾ ಸಾಧ್ಯವೇ ಇಲ್ಲ ಬಿಡಿ ಅಂತೀರಾ? ಇಲ್ಲಿ ಬಿಸಿಲ ಬೇಗೆಗೆ ಬೃಹದಾಕಾರದ ಬಂಡೆಯೊಂದು ಸೀಳುಬಿಟ್ಟಿದೆ. ಆಂಧ್ರಪ್ರದೇಶದಲ್ಲಿ ಕೆಂಡದಂಥ ಬಿಸಿಲಿದ್ದು, ಜನ ಹೈರಾಣಾಗಿದ್ದಾರೆ.

ಈ ಮಧ್ಯೆ ಬಿಸಿಲಿನ ತಾಪ ಎಷ್ಟಿದೆ ಎಂದರೆ ನಂಬಲಾರದಂಥ ದೊಡ್ಡ ಬಂಡೆಯೊಂದು ಸೀಳು ಬಿಡುವಷ್ಟಿದೆ! ಕರ್ನೂಲಿನ ಗೋಣೆಗಂಡ್ಲ ಮಂಡಲ ಕೇಂದ್ರದಲ್ಲಿ ಬಂಡೆ ಬಿರುಕುಬಿಟ್ಟಿದೆ. ಸೀಳುವಾಗ ಭಾರೀ ಸದ್ದು ಕೇಳಿದ್ದು, ಜನ ಭಯಬಿದ್ದಿದ್ದಾರೆ. ಸೀಳುಬಿಟ್ಟ ಬಂಡೆ ಉರುಳಿ ಬಿದ್ದರೆ ಏನು ಗತಿ ಎನ್ನುವ ಚಿಂತೆ ಸ್ಥಳೀಯರನ್ನು ಕಾಡಿದೆ.

ಬಿಸಿಲಿನ ಝಳ ಹೆಚ್ಚಾಗಿದ್ದು, ಬೆಳಗ್ಗೆ 10ರಿಂದ ಸಂಜೆ 4 ರವರೆಗೆ ಮನೆಯಿಂದ ಹೊರಬಾರದಂತೆ ಜನರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!