ಡಾಲರ್‌ ಎದುರು 36 ಪೈಸೆ ಕುಸಿದು ಸಾರ್ವಕಾಲಿಕ ಕನಿಷ್ಟಮಟ್ಟ ದಾಖಲಿಸಿದ ರೂಪಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಏರುತ್ತಿರುವ ಕಚ್ಚಾ ತೈಲ ಬೆಲೆಗಳು ವಿದೇಶಿ ಬಂಡವಾಳದ ಅನಿಯಮಿತ ಹೊರಹರಿವುಗಳಿಂದಾಗಿ ಅಮೆರಿಕದ ಡಾಲರ್‌ ವಿರುದ್ಧ ರೂಪಾಯಿ ಸಾರ್ವಕಾಲಿಕ ದಾಖಲೆ ಕುಸಿತ ಕಂಡಿದೆ.

ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಡಾಲರ್‌ ವಿರುದ್ಧ ರೂಪಾಯಿಯು 36 ಪೈಸೆಯಷ್ಟು ಕುಸಿದಿದ್ದು 78.29ರ ಮಟ್ಟವನ್ನು ತಲುಪಿದೆ. ಷೇರು ಮಾರುಕಟ್ಟೆಯೂ ಕುಸಿದಿದ್ದು ಸೆನ್ಸೆಕ್ಸ್ 1,467.90 ಪಾಯಿಂಟ್ ಅಂದರೆ 2.70 ರಷ್ಟು ಕುಸಿದು 52,835.54 ಕ್ಕೆ ತಲುಪಿದೆ ಮತ್ತು ನಿಫ್ಟಿ 417.90 ಪಾಯಿಂಟ್ ಅಂದರೆ 2.58 ರಷ್ಟು ಕುಸಿದು 15,783.90 ಕ್ಕೆ ತಲುಪಿದೆ.

ಶುಕ್ರವಾರ, ಇಂಟರ್‌ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರುಪಾಯಿಯು 77.81 ನಲ್ಲಿ ಪ್ರಾರಂಭವಾಯಿತು ಮತ್ತು US ಡಾಲರ್‌ಗೆ ವಿರುದ್ಧವಾಗಿ 77.79 ಮತ್ತು 77.93 ರ ಕನಿಷ್ಠ ಅಂತರವನ್ನು ಕಂಡಿತ್ತು. ಆದರೆ ಇಂದು ಇನ್ನೂ ಪಾತಳಕ್ಕೆ ತಲುಪಿದ್ದು 78.29ರ ಮಟ್ಟವನ್ನು ತಲುಪಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!