ಪಾತಾಳಕ್ಕೆ ಕುಸಿದ ರುಪಾಯಿ! ಈಗ ಎಷ್ಟಿದೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಈ ವರ್ಷದ ಆರಂಭದಿಂದಲೂ ರುಪಾಯಿ ಮೌಲ್ಯ ಕುಸಿಯುತ್ತಲೇ ಸಾಗುತ್ತಿದ್ದು ಪ್ರಸ್ತುತ ತನ್ನ ಇಲ್ಲಿಯವರೆಗಿನ ಸಾರ್ವಕಾಲಿಕ ಕುಸಿತದ ದಾಖಲೆಯನ್ನು ಮುರಿದಿದೆ.

ಇಂದಿನ ಆರಂಭಿಕ ವಹಿವಾಟಿನಲ್ಲಿ ರುಪಾಯಿಯು ಯುಎಸ್‌ ಡಾಲರ್‌ ವಿರುದ್ಧ ಕುಸಿದು ಸಾರ್ವಕಾಲಿಕ ಕನಿಷ್ಟ ಮಟ್ಟವನ್ನು ತಲುಪಿದೆ. ಪ್ರಸ್ತುತ ಒಂದು ಡಾಲರ್‌ ಗೆ ರೂಪಾಯಿ ಮೌಲ್ಯವು 79.55ರಷ್ಟಿದೆ. ಈ ವರ್ಷದ ಆರಂಭದಿಂದಲೂ ರುಪಾಯಿ ಕುಸಿಯುತ್ತಿದ್ದು ಇಲ್ಲಿಯವರೆಗೆ ಶೇ.6 ರಷ್ಟು ಕುಸಿತ ಕಂಡಿದೆ. ಹೆಚ್ಚುತ್ತಿರುವ ವ್ಯಾಪಾರ ಕೊರತೆ, ವಿದೇಶಿ ವಿನಿಮಯ ಮೀಸಲು ಕುಸಿತ, ನಿರಂತರ ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಐಐ) ಹೊರಹರಿವು ಮತ್ತು ಹೆಚ್ಚಿನ ಜಾಗತಿಕ ಇಂಧನ ಬೆಲೆಗಳು ಕರೆನ್ಸಿಯನ್ನು ಒತ್ತಡದಲ್ಲಿ ಇರಿಸಿದೆ.

ಇನ್ನೊಂದೆಡೆ ಆರು ಪ್ರತಿಸ್ಪರ್ಧಿ ಕರೆನ್ಸಿಗಳ ವಿರುದ್ಧ ಯುಎಸ್ ಡಾಲರ್ ಸೂಚ್ಯಂಕವು ಸೋಮವಾರ 20 ವರ್ಷಗಳ ಗರಿಷ್ಠ 108.02 ಕ್ಕೆ ಏರಿಕೆಯಾಗಿದ್ದು ಡಾಲರ್ ಸೂಚ್ಯಂಕವು ಈ ವರ್ಷ ಸುಮಾರು 12 ಪ್ರತಿಶತದಷ್ಟು ಜಿಗಿದು ಎರಡು ದಶಕಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಹೆಚ್ಚುತ್ತಿರುವ ಹಣದುಬ್ಬರವನ್ನು ನಿಯಂತ್ರಿಸಲು ಯುನೈಟೆಡ್ ಸ್ಟೇಟ್ಸ್ ಫೆಡರಲ್ ರಿಸರ್ವ್‌ನ ಆಕ್ರಮಣಕಾರಿ ಬಡ್ಡಿದರ ಹೆಚ್ಚಳವು ಕಳೆದ ಒಂದು ತಿಂಗಳಲ್ಲಿ ದಶಕಗಳಲ್ಲಿ ಡಾಲರ್ ಸೂಚ್ಯಂಕವ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!