ತೀವ್ರಗೊಳ್ಳುತ್ತಿರುವ ರಷ್ಯಾ-ಉಕ್ರೇನ್ ಯುದ್ಧ: ಝೆಲೆನ್ಸ್ಕಿಗೆ ಜೋ ಬಿಡೆನ್ ಭರವಸೆ, ಇಂದು ಜಿ7 ನಾಯಕರ ಸಭೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಷ್ಯಾ ಉಕ್ರೇನ್ ನಡುವಿನ ಯುದ್ಧ ತೀವ್ರವಾಗಿದೆ. ರಷ್ಯಾವನ್ನು ಕ್ರಿಮಿಯಾಗೆ ಸಂಪರ್ಕಿಸುವ ಸೇತುವೆಯ ಮುರಿದುಬಿದ್ದ ಬಳಿಕ ರಷ್ಯಾ ಉಕ್ರೇನ್‌ ಮೇಲೆ ತನ್ನ ಪ್ರತೀಕಾರವನ್ನು ತೀರಿಸಿಕೊಳ್ಳುತ್ತಿದೆ. ಶನಿವಾರದಿಂದ ಸತತವಾಗು ಉಕ್ರೇನ್‌ ಮೇಲೆ ಕ್ಷಿಪಣಿಗಳನ್ನು ಹಾರಿಸುತ್ತಿದೆ. ಇದುವರೆಗೂ  84 ಕ್ರೂಸ್ ಕ್ಷಿಪಣಿಗಳನ್ನು ಹಾರಿಸಿದೆ ಎಂದು ಉಕ್ರೇನ್ ಮಿಲಿಟರಿ ಹೇಳಿದೆ. ರಷ್ಯಾ ನಡೆಸಿದ ಬೃಹತ್ ಪ್ರತೀಕಾರದ  ಹತ್ತಾರು ಜನ ಸಾವನ್ನಪ್ಪಿ, ನೂರಾರು ಮಂದಿ ಗಾಯಗೊಂಡಿರುವುದಾಗಿ ಉಕ್ರೇನ್ ಹೇಳಿಕೊಂಡಿದೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾದ ವರ್ತನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಮವಾರ ತಡರಾತ್ರಿಯ ಭಾಷಣದಲ್ಲಿ ಸಶಸ್ತ್ರ ಪಡೆಗಳನ್ನು ಬಲಪಡಿಸುವುದಾಗಿ ವಾಗ್ದಾನಗೈದ ಝಲೆನ್ಸ್ಕಿ ರಷ್ಯಾಕ್ಕೆ ತಕ್ಕ ಪಾಠ ಕಲಿಸಲಾಗುವುದು ಎಂದರು. ಪಶ್ಚಿಮ ಉಕ್ರೇನ್‌ನ ಕೀವ್, ಎಲ್ವಿವ್, ಟೆರ್ನೋಪಿಲ್, ಝೈಟೊಮಿರ್, ಡ್ನಿಪ್ರೊ ಮತ್ತು ಕ್ರೆಮೆನ್‌ಚುಕ್, ದಕ್ಷಿಣದಲ್ಲಿ ಜಪೋರಿಜಿಯಾ ಮತ್ತು ಪೂರ್ವದಲ್ಲಿ ಖಾರ್ಕಿವ್‌ನಲ್ಲಿ ಸ್ಫೋಟಗಳು ಸಂಭವಿಸಿವೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲಿನಿಂದಲೂ ಉಕ್ರೇನ್‌ಗೆ ಬೆಂಬಲ ನೀಡುತ್ತಿರುವ ಅಮೆರಿಕ, ರಷ್ಯಾದ ವರ್ತನೆಗೆ ಕೆಂಡಾಮಂಡಲವಾಗಿದೆ. ಸೋಮವಾರ ರಾತ್ರಿ ಯುಎಸ್ ಅಧ್ಯಕ್ಷ ಜೋ ಬಿಡೆನ್ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರೊಂದಿಗೆ ಮಾತನಾಡಿದರು ಭರವಸೆಯ ಮಾತುಗಳನ್ನಾಡಿರುವುದಾಗಿ ಶ್ವೇತಭವನ ಪ್ರಕಟಣೆಯಲ್ಲಿ ತಿಳಿಸಿದೆ. ಕೀವ್ ಸೇರಿದಂತೆ ಉಕ್ರೇನ್‌ನಾದ್ಯಂತ ರಷ್ಯಾದ ಕ್ಷಿಪಣಿ ದಾಳಿಗಳನ್ನು ಖಂಡಿಸಿದರು. ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಬಿಡೆನ್ ಸಂತಾಪ ಸೂಚಿಸಿದ್ದಾರೆ. ರಷ್ಯಾ ದಾಳಿಗಳನ್ನು ಹಿಮ್ಮೆಟ್ಟಿಸಲು ಸುಧಾರಿತ ವಾಯು ರಕ್ಷಣಾ ವ್ಯವಸ್ಥೆಗಳನ್ನು ಒಳಗೊಂಡಂತೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ಉಕ್ರೇನ್‌ಗೆ ಒದಗಿಸುವುದಾಗಿ ಜೋ ಬಿಡೆನ್ ಉಕ್ರೇನ್ ಅಧ್ಯಕ್ಷರಿಗೆ ಭರವಸೆ ನೀಡಿದರು.

ಮತ್ತೊಂದೆಡೆ, ಯುಎಸ್ ಅಧ್ಯಕ್ಷ ಜೋ ಬಿಡನ್ ಮತ್ತು ಇತರ ಗ್ರೂಪ್ ಆಫ್ ಸೆವೆನ್ (ಜಿ 7) ನಾಯಕರು ಉಕ್ರೇನ್ ಅನ್ನು ಬೆಂಬಲಿಸಲು ಮತ್ತು ರಷ್ಯಾದ ಅಧ್ಯಕ್ಷ ಪುಟಿನ್ ಅವರಿಗೆ ದೃಢವಾದ ಉತ್ತರವನ್ನು ನೀಡಲು ಮಂಗಳವಾರ ವರ್ಚುವಲ್ ಸಭೆಯನ್ನು ನಡೆಸಲಿದ್ದಾರೆ ಎಂದು ವೈಟ್ ಹೌಸ್ ದೃಢಪಡಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!