ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಈ ಶ್ವಾನಕ್ಕೆ ಮಸಾಜ್ ಮಾಡಿಸಿಕೊಳ್ಳುವುದೆಂದರೆ ಎಷ್ಟು ಖುಷಿ ಗೊತ್ತಾ?: ಈ ದೃಶ್ಯ ನೋಡಿದರೆ ಮುಖದಲ್ಲಿ ನಗು ಅರಳೋದು ಗ್ಯಾರೆಂಟಿ!!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಶ್ವಾನಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಮನೆಯ ಮುದ್ದಿನ ಪ್ರಾಣಿಗಳ ಲಿಸ್ಟ್ ನಲ್ಲಿ ಶ್ವಾನಕ್ಕೆ ಬಹುಶ: ಮೊದಲ ಪ್ರಾಶಸ್ತ್ಯ. ಅದರಲ್ಲೂ ಐಷಾರಾಮಿ ಮನೆಗಳಲ್ಲಿನ ಶ್ವಾನವಂತೂ ಮನೆಯ ಸದಸ್ಯರಂತೆಯೇ. ತಮ್ಮಂತೆ ಶ್ವಾನಗಳಿಗೂ ಸ್ನಾನ, ನಿದ್ದೆ, ಊಟ ಪ್ರತಿಯೊಂದಕ್ಕೂ ಈಷಾರಮಿ ವ್ಯವಸ್ಥೆ ಮಾಡಿರುತ್ತಾರೆ.

ಸದ್ಯ ಇಂತಹದ್ದೇ ಒಂದು ಮುದ್ದು ಶ್ವಾನಕ್ಕೆ ಮಸಾಜ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ನೋಡಿದ ತಕ್ಷಣ ಎಲ್ಲರನ್ನೂ ಸೆಳೆದು ಬಿಡುವ ಅದ್ಭುತ ದೃಶ್ಯ ಇದಾಗಿದೆ.

ವಿಡಿಯೋದಲ್ಲಿ ಏನಿದೆ?

ಕ್ಯೂಟ್ ಶ್ವಾನವೊಂದು ತನ್ನ ಸ್ಪಾ ಟೈಮ್ ಅನ್ನು ಆನಂದಿಸುವ ದೃಶ್ಯವಿದು. ಮಹಿಳೆಯೊಬ್ಬರು ಶ್ವಾನವನ್ನು ಬೆಡ್ ಮೇಲೆ ಮಲಗಿಸಿಕೊಂಡು ಕಾಲು, ಬುಜಕ್ಕೆ ಹಿತವಾಗಿ ಮಸಾಜ್ ಮಾಡುತ್ತಿದ್ದಾರೆ. ಮಸಾಜ್ ಆನಂದವನ್ನು ಶ್ವಾನ ಅನುಭವಿಸುತ್ತಿದೆ. ಹಾಗೇ ಹಲ್ಲುಜ್ಜುವುದನ್ನೂ ನೋಡಬಹುದು. ಮಾಸ್ಕ್‌ ಧರಿಸಿ ಮಲಗಿರುವ ಈ ಶ್ವಾನವನ್ನು ನೋಡಿದರೆ ನಿಮ್ಮ ಮುಖದಲ್ಲಿ ನಗು ಅರಳದೇ ಇರಲಾರದು.

1 ನಿಮಿಷದ ಈ ವಿಡಿಯೋವನ್ನು  @buitengebieden ಎಂಬ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದೆ. ವಿಡಿಯೋ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss