ಹೊಸದಿಗಂತ ಡಿಜಿಟಲ್ ಡೆಸ್ಕ್
ಲಕ್ಷಾಂತರ ಶ್ರದ್ಧಾಳುಗಳನ್ನು ಹೊಂದಿ ಆಧ್ಯಾತ್ಮ ಮತ್ತು ಸೇವಾಕಾರ್ಯಗಳಲ್ಲಿ ತೊಡಗಿಕೊಂಡಿರುವ ಮಾತಾ ಅಮೃತಾನಂದಮಯಿ ಮತ್ತು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹರ್ಯಾಣದ ಫರೀದಾಬಾದಿನಲ್ಲಿ ಒಂದೇ ವೇದಿಕೆಯಲ್ಲಿದ್ದರು. ಆಧುನಿಕ, ಸುಸಜ್ಜಿತ ಅಮೃತಾ ಆಸ್ಪತ್ರೆಯ ಲೋಕಾರ್ಪಣೆಯ ಸಂದರ್ಭ ಅದಾಗಿತ್ತು. ಈ ಹಂತದಲ್ಲಿ ಒಂದು ಹೃದಯಂಗಮ ದೃಶ್ಯಕ್ಕೆ ವೇದಿಕೆ ಸಾಕ್ಷಿಯಾಯಿತು. ಆ ದೃಶ್ಯ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಮೆಚ್ಚುಗೆ ಪಡೆಯುತ್ತಿದೆ.
ಹರ್ಯಾಣದ ಫರೀದಾಬಾದಿನಲ್ಲಿ ಅಮೃತಾ ಆಸ್ಪತ್ರೆ ಲೋಕಾರ್ಪಣೆ ವೇಳೆ ಜನತೆ ಸಾಕ್ಷಿಯಾದ ದೃಶ್ಯ pic.twitter.com/zIacsWrENs
— Hosadigantha (@HosadiganthaWeb) August 24, 2022