ಉಪ್ಪಳ ಬೆನ್ನಲ್ಲೇ ಮುಟ್ಟಂ ಬೇರಿಕೆಯಲ್ಲೂ ಘರ್ಜಿಸುತ್ತಿರುವ ಕಡಲು: ಸಮುದ್ರ ಪಾಲಾಗುವ ಭೀತಿಯಲ್ಲಿ ರಸ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಾಸರಗೋಡು ಜಿಲ್ಲೆಯ ಉಪ್ಪಳ ಶಿವಾಜಿನಗರದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಈಗಾಗಲೇ ಇಲ್ಲಿನ ಮನೆಯೊಂದು ಸಮುದ್ರ ಪಾಲಾದ ಬೆನ್ನಲ್ಲೇ, ಪಕ್ಕದ ಮಂಗಲ್ಪಾಡಿ ಗ್ರಾಮ ಪಂಚಾಯಿತಿಯ 16ನೇ ವಾರ್ಡ್‌ನ ಮುಟ್ಟಂ ಬೇರಿಕೆ ಪ್ರದೇಶದಲ್ಲಿ ಸಮುದ್ರದ ರಕ್ಕಸ ಅಲೆಗಳು ರಸ್ತೆಯನ್ನು ನುಂಗಲಾರಂಭಿಸಿವೆ. ಕಣ್ಣೆದುರಲ್ಲೇ ಉಂಟಾಗುತ್ತಿರುವ ದುರಂತ ಕಂಡು ಸ್ಥಳೀಯ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಈ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಸಮುದ್ರದ ಅಬ್ಬರ ಹೆಚ್ಚಾಗಿದ್ದು, ಅಲೆಗಳು ರಸ್ತೆಯನ್ನು ವೇಗವಾಗಿ ಕೊರೆಯುತ್ತಿವೆ. ರಸ್ತೆ ಸಂಪೂರ್ಣವಾಗಿ ಸಮುದ್ರ ಪಾಲಾದರೆ ಈ ಭಾಗದಲ್ಲಿರುವ … Continue reading ಉಪ್ಪಳ ಬೆನ್ನಲ್ಲೇ ಮುಟ್ಟಂ ಬೇರಿಕೆಯಲ್ಲೂ ಘರ್ಜಿಸುತ್ತಿರುವ ಕಡಲು: ಸಮುದ್ರ ಪಾಲಾಗುವ ಭೀತಿಯಲ್ಲಿ ರಸ್ತೆ