Wednesday, August 10, 2022

Latest Posts

ಠಾಕ್ರೆಗೆ ಮತ್ತೆ ಕೈಕೊಟ್ಟ ‘ಶಿವ’ ಸೈನಿಕರು: ‘ಮಹಾ’ ಸಿಎಂ ಶಿಂಧೆಗೆ ಬೆಂಬಲ ಸೂಚಿಸಿದ 12 ಮಂದಿ ಸಂಸದರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಮತ್ತೆ 12 ಮಂದಿ ಸಂಸದರು ಕೈಕೊಟ್ಟಿದ್ದಾರೆ. ಠಾಕ್ರೆ ಜೊತೆಗಿದ್ದ 19 ಸಂಸದರ ಪೈಕಿ, 12 ಮಂದಿ ಸಿಎಂ ಏಕನಾಥ್​ ಶಿಂಧೆಗೆ ಬೆಂಬಲ ಸೂಚಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಶಿವಸೇನೆ ಒಟ್ಟು 19 ಸಂಸದರನ್ನು ಹೊಂದಿದೆ. ಇದರಲ್ಲಿ 12 ಸಂಸದರು ದೆಹಲಿಯಲ್ಲಿ ಏಕನಾಥ್​ ಶಿಂಧೆ ಅವರನ್ನ ಭೇಟಿ ಮಾಡಿದ್ದು, ತಮ್ಮ ಬೆಂಬಲ ಘೋಷಣೆ ಮಾಡಿದ್ದಾರೆ. ಇದರ ಜೊತೆಗೆ ಸ್ಪೀಕರ್​ ಓಂ ಬಿರ್ಲಾ ಅವರನ್ನ ಭೇಟಿಯಾಗಿದ್ದಾರೆಂದು ತಿಳಿದು ಬಂದಿದೆ.
ಮುಂಬೈ ದಕ್ಷಿಣ ಕೇಂದ್ರ ಕ್ಷೇತ್ರದ ಸಂಸದ ರಾಹುಲ್ ಶೆವಾಲೆ ನೇತೃತ್ವದಲ್ಲಿ ಸಂಸದರ ಬಳಗ ದೆಹಲಿಯಲ್ಲಿ ಉಳಿದುಕೊಂಡಿದ್ದು, ತಮ್ಮನ್ನು ಪ್ರತ್ಯೇಕ ಗುಂಪು ಎಂದು ಪರಿಗಣಿಸುವಂತೆ ಸ್ಪೀಕರ್​ಗೆ ಪತ್ರ ಬರೆದಿದ್ದಾರೆ.

ಇತ್ತ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಬೆಂಬಲ ಸೂಚಿಸಲು ಶಿವಸೇನೆ ಸಂಸದರು ಉದ್ಧವ್ ಠಾಕ್ರೆ ಮೇಲೆ ಒತ್ತಡ ಹೇರಿದ್ದರು. ಹೀಗಾಗಿ, ಸುದ್ದಿಗೋಷ್ಠಿಯಲ್ಲಿ ತಾವು ಎನ್​ಡಿಎ ಅಭ್ಯರ್ಥಿಗೆ ಬೆಂಬಲ ಘೋಷಣೆ ಮಾಡುತ್ತಿರುವುದಾಗಿ ಉದ್ಧವ್​ ಠಾಕ್ರೆ ಬಹಿರಂಗವಾಗಿ ಘೋಷಣೆ ಮಾಡಿದ್ದರು.

ಇನ್ನು ಉದ್ಧವ್ ಠಾಕ್ರೆ ಬಳಗದಲ್ಲಿ ಗುರುತಿಸಿಕೊಂಡಿದ್ದ ರಾಮದಾಸ್ ಕದಂ ಸೇರಿದಂತೆ ಕೆಲವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss