Sunday, July 3, 2022

Latest Posts

ನನ್ನನ್ನು ವೈಷ್ಣೋದೇವಿ ಯಾತ್ರೆ ಕರ್ಕೊಂಡು ಹೋಗ್ತೀನಿ ಎಂದಿದ್ದ ಮಗ: ಹುತಾತ್ಮ ಸೇನಾಧಿಕಾರಿಯ ನೆನಪಲ್ಲಿ ತಂದೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನ ಕೂನೂರಿನ ಹೆಲಿಕಾಪ್ಟರ್​ ದುರಂತದಲ್ಲಿ ಹುತಾತ್ಮರಾದ 13 ಜನರಲ್ಲಿ ಒಬ್ಬರಾದ ಲ್ಯಾನ್ಸ್​ ಶ್ರೇಣಿಯ ಸೇನಾಧಿಕಾರಿ ನಾಯಕ್​ ಜಿತೇಂದ್ರ ಕುಮಾರ್​ ವರ್ಮ ಅವರನ್ನು ನೆನೆದು ಮನೆಯವರು ಕಣ್ಣೀರು ಹಾಕುತ್ತಿದ್ದಾರೆ.
ಮಧ್ಯಪ್ರದೇಶದ ಸೆಹೋರ್​ ಜಿಲ್ಲೆಯ ಧಮಂದ ಗ್ರಾಮದ ಮೂಲದ ಜಿತೇಂದ್ರ ಕುಮಾರ್​ ಕಳೆದ ದೀಪಾವಳಿ ಹಬ್ಬಕ್ಕೆ ತಮ್ಮ ಮನೆಗೆ ವಾಪಸಾಗಿದ್ದರು.ಆ ವೇಳೆ ಕುಟುಂಬದೊಡನೆ ಕಳೆದ ಆನಂದದ ಕ್ಷಣಗಳೇ ಈಗ ಅವರ ನೆನಪಾಗಿ ಉಳಿದಿದ್ದು, ಆ ದಿನಗಳನ್ನು ನೆನೆಯುತ್ತಿದ್ದಾರೆ.
ಈ ಕುರಿತು ವರ್ಮಾರ ತಂದೆ ಶಿವರಾಜ್​​ ಮಗನ ಕುರಿತು ಕೆಲವು ವಿಚಾರಗಳನ್ನು ನೆನಪು ಮಾಡಿಕೊಂಡಿದ್ದು, ತಮ್ಮ ಪುತ್ರನ ಕೊನೆಯ ಭೇಟಿಯ ವೇಳೆ ಮುಂದಿನ ರಜೆಯಲ್ಲಿ ಬಂದಾಗ ನನ್ನನ್ನು ವೈಷ್ಣೋದೇವಿ ಯಾತ್ರೆ ಕರ್ಕೊಂಡುಹೋಗ್ತೀನಿ ಅಂದಿದ್ದನು ಎಂದರು .
2011ರಲ್ಲಿ ಸೇನೆ ಸೇರಿದ್ದ ಜಿತೇಂದ್ರ ಕುಮಾರ್​ ವರ್ಮ 3 ಪಾರಾ (ಎಸ್​​ಎಫ್​) ರೆಜಿಮೆಂಟ್​ನಲ್ಲಿದ್ದ ಎಕ್ಸ್​​ಪರ್ಟ್​ ಸ್ನೈಪರ್​ ಆಗಿದ್ದರು. ಸೇನಾ ಪಡೆಗಳ ಮುಖ್ಯಸ್ಥ ಜನರಲ್​ ಬಿಪಿನ್​ ರಾವತ್​​ರ ಖಾಸಗಿ ಭದ್ರತಾ ಅಧಿಕಾರಿಗಳಲ್ಲಿ ಒಬ್ಬರಾಗಿ ನಿಯೋಜನೆಯಲ್ಲಿದ್ದರು. ಜಿತೇಂದ್ರ ಕುಮಾರ್​​ ತಮ್ಮ ತಂದೆಯ ಜೊತೆಗೆ, ಪತ್ನಿ, 4 ವರ್ಷದ ಪುತ್ರಿ ಮತ್ತು 1 ವರ್ಷದ ಪುತ್ರನನ್ನು ಅಗಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss