ಮಗುವಿನ ನಗುವಿನ ಧ್ವನಿ, ವಿಶೇಷ ಆತ್ಮೀಯರೊಂದಿಗೆ ಈ ಕ್ಷಣ: ರಿಲ್ಯಾಕ್ಸ್‌ ಮೂಡ್‌ನಲ್ಲಿ ರಿಷಬ್‌-ರಕ್ಷಿತ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕಾಂತಾರ ಸಿನಿಮಾ ನಟ, ನಿರ್ದೇಶಕ ರಿಷಬ್‌ ಶೆಟ್ಟಿ (Rishab Shetty) ಪತ್ನಿ ಪ್ರಗತಿ,ರಕ್ಷಿತ್‌ ಶೆಟ್ಟಿ ತಮ್ಮ ಆತ್ಮೀಯ ಸ್ನೇಹಿತರ ಜತೆ ರಿಲ್ಯಾಕ್ಸ್‌ ಮೂಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಸಪ್ತ ಸಾಗರದಾಚೆ ಎಲ್ಲೊ, ರಿಚರ್ಡ್ ಆಂಟನಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ರಕ್ಷಿತ್‌ ಶೆಟ್ಟಿ ಬ್ಯುಸಿಯಾಗಿದ್ದಾರೆ.ಇದರ ನಡುವೆ ರಿಷಬ್ ಶೆಟ್ಟಿ ಮುದ್ದು ಮಗಳ ಜೊತೆ ರಕ್ಷಿತ್ ಸಂತಸದ ಕ್ಷಣ ಅನುಭವಿಸಿದ್ದಾರೆ.

ರಕ್ಷಿತ್‌ ಶೆಟ್ಟಿ, ರಿಷಬ್‌ ಪತ್ನಿ ಪ್ರಗತಿ ಶೆಟ್ಟಿ, ಗೆಳೆಯರಾದ ಪ್ರಮೋದ್ ಶೆಟ್ಟಿ, ಶೀತಲ್‌ ಶೆಟ್ಟಿ ಜತೆ ಪ್ರವಾಸ ಸಂಭ್ರಮಿಸುತ್ತಿದ್ದಾರೆ.

`ʻʻಅನ್ವೇಷಿಸದ ಅರಣ್ಯದಲ್ಲಿನ ನಿಗೂಢತೆ, ಹರಿಯುವ ನೀರಿನಲ್ಲಿ ಪ್ರಶಾಂತತೆ, ಮಗುವಿನ ನಗುವಿನ ಧ್ವನಿ, ನನ್ನ ವಿಶೇಷ ಆತ್ಮೀಯರೊಂದಿಗೆ. ಆಹ್ ಜೀವನದ ಅನೇಕ ಸಣ್ಣ ಸಂತೋಷಗಳುʼʼ ಎಂದು ಇನ್‌ಸ್ಟಾದಲ್ಲಿ ರಕ್ಷಿತ್‌ ಶೆಟ್ಟಿ ಬರೆದುಕೊಂಡಿದ್ದಾರೆ.
ಫೋಟೊಗಳನ್ನು ನೋಡಿ ರಕ್ಷಿತ್‌ ಶೆಟ್ಟಿ ಅಭಿಮಾನಿಗಳು ಕಮೆಂಟ್‌ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!