Wednesday, July 6, 2022

Latest Posts

ಉತ್ತರ ಕನ್ನಡದಲ್ಲಿ ಕಾಣಿಸಿತು ಚಲಿಸುವ ಸರಣಿ ಬೆಳಕು: ರಸ್ತೆಗಿಳಿದು ಆಕಾಶ ನೋಡುತ್ತ ನಿಂತ ಜನರು

ಹೊಸದಿಗಂತ ವರದಿ, ಮುಂಡಗೋಡ:

ಆಕಾಶದಲ್ಲಿ ಸರಣಿ ಬೆಳಕು ಒಂದರ ಹಿಂದೆ ಒಂದು ಚಲಿಸುವ ಅದ್ಭುತ ದೃಶ್ಯ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಾಗೂ ಪಟ್ಟಣದಲ್ಲಿ ಕಂಡುಬಂದಿದೆ.
ಗ್ರಾಮೀಣ ಭಾಗದಲ್ಲಿ ಕೆಲವರಿಗೆ ಆಕಾಶದಲ್ಲಿ ಸುಮಾರು ಇಪ್ಪತೈದು ಮೂವತ್ತು ನಕ್ಷತ್ರಗಳಂತೆ ಕಾಣುವ ಬೆಳಕು ಕಂಡ ಸಾರ್ವಜನಿಕರು ಆಶ್ಚರ್ಯಪಟ್ಟಿದ್ದಾರೆ. ಪಟ್ಟಣದಲ್ಲಿನ ನೂರಾರು ಸಂಖ್ಯೆಯಲ್ಲಿ ಜನರು ರಸ್ತೆಗಿಳಿದು ಈ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಂಡಿದ್ದಾರೆ.
ಕೆಲವು ದಿನಗಳ ಮೊದಲು ಇದೆ ತರಹದ ಬೆಳಕು ಕಂಡು ಬಂದಿತ್ತು ಎಂದು ಕೆಲವರು ಮಾತನಾಡುತ್ತಿದ್ದರು. ಆದರೆ ಆಕಾಶದಲ್ಲಿ ಸಾಲು ಸಾಲು ನಕ್ಷತ್ರ ರೂಪದಲ್ಲಿ ಕಂಡ ಬೆಳಕು ಅಮೆರಿಕದ ಸ್ಪೇಸ್ ಎಕ್ಸ್ ಕಂಪನಿಯ ಕೃತಕ ಉಪಗ್ರಹಗಳು ಎನ್ನುವ ಮಾಹಿತಿ ಹೊರಬಿದ್ದಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss