Saturday, December 9, 2023

Latest Posts

ಸಿಇಟಿಗೆ ಅರ್ಜಿ ಹಾಕಲು ಸುಲಭ ಮಾರ್ಗ ಹುಡುಕಿದ ರಾಜ್ಯ ಶಿಕ್ಷಣ ಇಲಾಖೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿದ್ಯಾರ್ಥಿಗಳು ಸಿಇಟಿ (CET) ಗೆ ಅರ್ಜಿ ಹಾಕಲು ಇನ್ಮುಂದೆ ಕಷ್ಟ ಪಡುವ ಅಗತ್ಯ ಇಲ್ಲ. ಸ್ಯಾಟ್ಸ್ ಮಾಹಿತಿಯಿಂದ ಕೆಇಎ ಬೋರ್ಡ್​ಗೆ ಮಾಹಿತಿ ಕೊಡಲಾಗುತ್ತದೆ. ಮುಂದಿನ ದಿನಗಳಲ್ಲಿ ಇದನ್ನು ಜಾರಿ ಮಾಡಲಾಗುತ್ತದೆ ಎಂದು ಸಚಿವ ಬಿ.ಸಿ. ನಾಗೇಶ್ ಹೇಳಿದರು.

ವಿಕಾಸಸೌಧದಲ್ಲಿ ಸಚಿವ ಬಿ.ಸಿ. ನಾಗೇಶ್ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಎಂಜಿನಿಯರಿಂಗ್ ಸೀಟ್​ಗಳಿಗೆ ಸಿಇಟಿ ಅರ್ಜಿ ಹಾಕುವಾಗ ವಿದ್ಯಾರ್ಥಿಗಳು ತಪ್ಪು ಮಾಹಿತಿಗಳನ್ನು ಹಾಕುತ್ತಿದ್ದರು. ಶಾಲಾ ಶಿಕ್ಷಣ ಇಲಾಖೆಯಲ್ಲಿ ಎಸ್​ಎಸ್ಎಲ್​ಸಿಯಲ್ಲಿ ಇರುವಾಗಲೇ ವಿದ್ಯಾರ್ಥಿಗಳ ಮಾಹಿತಿ ಇರಲಿದೆ. ಹೀಗಾಗಿ ದಾಖಲಾತಿ ಪರಿಶೀಲನೆ, ಅರ್ಜಿ ಸಲ್ಲಿಕೆ ಇದೆಲ್ಲವನ್ನೂ ಇಲಾಖೆಯಿಂದ ನೇರವಾಗಿ ತೆಗೆದುಕೊಳ್ಳಲು ನಿರ್ಧಾರ ಮಾಡಲಾಗಿದೆ. ಶಾಲಾ ಶಿಕ್ಷಣ ಇಲಾಖೆಯ ಸ್ಯಾಟ್ಸ್ ಮಾಹಿತಿಯಿಂದ ನಾವು ಮಾಹಿತಿ ಪಡೆದುಕೊಳ್ಳುತ್ತೇವೆ. ವಿದ್ಯಾರ್ಥಿಗಳಿಗೆ ಸಮಸ್ಯೆ ಆಗದಂತೆ ‌ಪ್ರಕ್ರಿಯೆ ಮಾಡುತ್ತೇವೆ ಎಂದು
ಡಾ. ಅಶ್ವಥ್ ನಾರಾಯಣ ಎಂದರು.

ಇನ್ನು ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಟ್ರೈನಿಂಗ್ ಕೊಡಲು ಮಾಸ್ಟರ್ ಟ್ರೈನರ್ಸ್​​ಗಳನ್ನು ನೇಮಕ ಮಾಡಲಾಗುತ್ತದೆ. ಪ್ರತಿ ಜಿಲ್ಲೆಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡುತ್ತೇವೆ. ಮುಂದಿನ ವರ್ಷದಿಂದಲೇ ಈ ವ್ಯವಸ್ಥೆ ಜಾರಿ ಮಾಡುತ್ತೇವೆ ಎಂದು ಸಚಿವ ಡಾ. ಅಶ್ವಥ್ ನಾರಾಯಣ ತಿಳಿಸಿದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!