Wednesday, June 29, 2022

Latest Posts

ಪರೀಕ್ಷೆ ಬರೆಯುವ ವಿದ್ಯಾರ್ಥಿಗಳೇ ನಿಜವಾದ ಕೊರೋನಾ ವಾರಿಯರ್ಸ್: ಸಚಿವ ಎಸ್. ಸುರೇಶ್ ಕುಮಾರ್

ಹೊಸದಿಗಂತ ಆನ್ ಲೈನ್ ಡೆಸ್ಕ್:

ರಾಜ್ಯದಲ್ಲಿ ಮೇ 24 ರಿಂದ ಪಿ.ಯು.ಸಿ ಪರೀಕ್ಷೆಗಳು, ಜೂನ್ 20 ರಿಂದ SSLC ಪರೀಕ್ಷೆಗಳು ಆರಂಭವಾಗುತ್ತಿದ್ದು, ಪರೀಕ್ಷಾ ಕೇಂದ್ರಗಳು ಸುರಕ್ಷತಾ ಕೇಂದ್ರಗಳಾಗಿರುತ್ತವೆ ಎಂದು ಚಿಕ್ಕಬಳ್ಳಾಪುರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ.
ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಹೇಳಿಕೆ ನೀಡಿದ ಅವರು, ಎಸ್​ಎಸ್​ಎಲ್​ಸಿಗೆ 8 ಲಕ್ಷ 75 ಸಾವಿರದ 798 ಜನ ವಿದ್ಯಾರ್ಥಿಗಳ ನೋಂದಣಿ ಮಾಡಿಕೊಂಡಿದ್ದಾರೆ. ಪಿ.ಯು.ಸಿ ಗೆ 7 ಲಕ್ಷದ 1ಸಾವಿರದ 651ಜನ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಸಿಲೇಬಸ್​ನಲ್ಲಿ ಶೇಕಡಾ 30ರಷ್ಟು ಕಡಿಮೆ ಮಾಡಿ 90ರಷ್ಟು ಪಾಠ ಪ್ರವಚನಗಳು ಮುಗಿದಿವೆ. ಕೊರೋನಾ ಮಧ್ಯೆಯೂ ಪರೀಕ್ಷೆ ನಡೆಸುವುದು ನಮ್ಮ ಕರ್ತವ್ಯ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳೇ ನಿಜವಾದ ಕೊರೋನಾ ವಾರಿಯರ್ಸ್ ಎಂದರು.
ಕೊರೋನಾ ವಿರುದ್ಧ ಅಸಹಕಾರ ಚಳವಳಿ ಆಗಬೇಕು. ಸೋಂಕು ಏಪ್ರಿಲ್​ನಲ್ಲಿ ಹೆಚ್ಚಾಗುತ್ತೆ ಮೇನಲ್ಲಿ ಕಡಿಮೆಯಾಗುತ್ತೆ ಅನ್ನೋ ವರದಿಗಳಿವೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಬ್ರಿಡ್ಜ್ ಕೋರ್ಸ್ ಆರಂಭಿಸಲಾಗುವುದು. ಕೊರೋನಾ ಜೊತೆ ಬದುಕು ಅನಿವಾರ್ಯವಾಗಿದೆ ಎಂದರು.
ಖಾಸಗಿ ಶಾಲಾ ಟ್ಯೂಷನ್ ಫೀಸ್ ವಿಚಾರ ಹೈಕೋರ್ಟ್​ನಲ್ಲಿದೆ. ಮುಂದಿನ ದಿನಗಳಲ್ಲಿ ಶಿಕ್ಷಣ ಇಲಾಖೆಯಿಂದಲೇ ಒಂದು ಟಿವಿ ಚಾನಲ್ ಆರಂಭಿಸುವ ಪ್ರಸ್ತಾಪವಿದೆ ಎಂದು ಹೇಳಿಕೆ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss