ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್‌ ಧೋನಿ’ಗೆ ಸುಪ್ರೀಂಕೋರ್ಟ್ ನಿಂದ ನೋಟಿಸ್ ಜಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಆಮ್ರಪಾಲಿ ಗ್ರೂಪ್ ಜೊತೆಗಿನ ವಹಿವಾಟಿನ ವಿಷಯಕ್ಕೆ ಸಂಬಂಧಿಸಿದಂತೆ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಆಮ್ರಪಾಲಿ ಗ್ರೂಪ್ ಮತ್ತು ಮಹೇಂದ್ರ ಸಿಂಗ್ ಧೋನಿಗೆ ಸಂಬಂಧಿಸಿದ ಈ ಪ್ರಕರಣವು ಈ ಹಿಂದೆ ದೆಹಲಿ ಹೈಕೋರ್ಟ್‌ನಲ್ಲಿ ನಡೆಯುತ್ತಿತ್ತು. ಅದಕ್ಕಾಗಿ ಸಮಿತಿ ರಚನೆಯಾಗಿತ್ತು. ನಿವೃತ್ತ ನ್ಯಾಯಮೂರ್ತಿ ವೀಣಾ ಬೀರಬಲ್ ನೇತೃತ್ವದ ಈ ಸಮಿತಿಯು ಸಮಸ್ಯೆಯನ್ನು ಪರಿಹರಿಸುವ ಜವಾಬ್ದಾರಿಯನ್ನು ಹೊಂದಿತ್ತು.
ಇದೀಗ ಸಂತ್ರಸ್ತರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂಕೋರ್ಟ್‌ನಲ್ಲಿ ನಡೆದ ವಿಚಾರಣೆಯಲ್ಲಿ, ಆಮ್ರಪಾಲಿ ಗ್ರೂಪ್‌ಗೆ ಹಣದ ಕೊರತೆಯಿದೆ ಎಂದು ಸಂತ್ರಸ್ತರ ಪರವಾಗಿ ವಾದಿಸಲಾಗಿದೆ, ಆದ್ದರಿಂದ ಅವರು ಬುಕ್ ಮಾಡಿದ ಫ್ಲ್ಯಾಟ್‌ಗಳು ಲಭ್ಯವಿಲ್ಲ ಎಂದಿದ್ದರು.
ದೆಹಲಿ ಹೈಕೋರ್ಟ್ ರಚಿಸಿರುವ ಸಮಿತಿಯ ಮುಂದೆ ಧೋನಿ 150 ಕೋಟಿ ರೂ.ಗಳನ್ನು ತೆಗೆದುಕೊಂಡಿದ್ದಾರೆ ಎಂದು ಸಂತ್ರಸ್ತರು ಹೇಳುತ್ತಾರೆ. ಮಹೇಂದ್ರ ಸಿಂಗ್ ಧೋನಿ ಆಮ್ರಪಾಲಿ ಗ್ರೂಪ್‌ನ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಇದಕ್ಕಾಗಿ ಅವರು 150 ಕೋಟಿ ಪಡೆಯಲಿದ್ದಾರೆ. ಇದೀಗ ಎಂಎಸ್ ಧೋನಿಯ ಬಾಕಿ ಪಾವತಿಸಲು ಆಮ್ರಪಾಲಿ ಗ್ರೂಪ್ ಹಣ ವ್ಯಯಿಸಿದರೆ ಅವ್ರ ಫ್ಲಾಟ್‌ಗಳು ಲಭ್ಯವಾಗುವುದಿಲ್ಲ ಎಂದು ಸಂತ್ರಸ್ತರ ಪರವಾಗಿ ವಾದಿಸಲಾಗಿದೆ.
ಇದೀಗ ಸುಪ್ರೀಂಕೋರ್ಟ್ ಮಹೇಂದ್ರ ಸಿಂಗ್ ಧೋನಿ ಮತ್ತು ಆಮ್ರಪಾಲಿ ಗ್ರೂಪ್‌ಗೆ ನೋಟಿಸ್ ಜಾರಿ ಮಾಡಿದ್ದು, ತಮ್ಮ ಪರ ಹಾಜರುಪಡಿಸುವಂತೆ ಸೂಚಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!