ಇಂದು ಇಡಬ್ಲ್ಯೂಎಸ್‌ ಮೀಸಲಾತಿ ಕುರಿತು ಮಹತ್ವದ ತೀರ್ಪು ನೀಡಲಿದೆ ಸುಪ್ರಿಂ ಕೋರ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯುಎಸ್) 10 ಪ್ರತಿಶತ ಕೋಟಾವನ್ನು ಒದಗಿಸುವ 103 ನೇ ಸಂವಿಧಾನದ ತಿದ್ದುಪಡಿಯನ್ನು ಪ್ರಶ್ನಿಸುವ ಅರ್ಜಿಗಳ ಕುರಿತು ಸರ್ವೋಚ್ಛ ನ್ಯಾಯಾಲಯವು ಇಂದು ಮಹತ್ವದ ತೀರ್ಪು ನೀಡಲಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಯುಯು ಲಲಿತ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠದಿಂದ ಇಂದು ತೀರ್ಪು ಹೊರಬೀಳಲಿದೆ ಎಂದು ಮೂಲಗಳು ವರದಿ ಮಾಡಿವೆ

ಏಳು ದಿನಗಳಲ್ಲಿ 20 ಕ್ಕೂ ಹೆಚ್ಚು ವಕೀಲರನ್ನು ಆಲಿಸಿದ ನಂತರ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 27 ರಂದು ತನ್ನ ಆದೇಶವನ್ನು ಕಾಯ್ದಿರಿಸಿತ್ತು.

ಹೆಚ್ಚಿನ ಅರ್ಜಿದಾರರು ತಿದ್ದುಪಡಿಯ ಸಿಂಧುತ್ವವನ್ನು ಪ್ರಶ್ನಿಸಿದ್ದರು ಮತ್ತು ಅದನ್ನು ರದ್ದುಗೊಳಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದ್ದರು, ಪ್ರತಿವಾದಿ ಕೇಂದ್ರ ಸರ್ಕಾರ ಮತ್ತು ಕೆಲವು ರಾಜ್ಯಗಳು ಮೀಸಲಾತಿಯ ನಿಬಂಧನೆಯನ್ನು ಸಮರ್ಥಿಸಿ ನ್ಯಾಯಾಲಯದ ಬಳಿ ಬೇಡಿಕೆ ಇಟ್ಟಿದ್ದವು.

EWS ಕೋಟಾವು ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸಿದೆಯೇ ಎಂಬ ಕಾನೂನು ಪ್ರಶ್ನೆಗೆ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ನೀಡಲಿದೆ. 2019 ರಲ್ಲಿ ‘ಜನ್ಹಿತ್ ಅಭಿಯಾನ’ ಸಲ್ಲಿಸಿದ ಪ್ರಮುಖ ಸೇರಿದಂತೆ ಹೆಚ್ಚಿನ ಮನವಿಗಳು ಸಂವಿಧಾನ ತಿದ್ದುಪಡಿ (103 ನೇ) ಕಾಯಿದೆ 2019 ರ ಸಿಂಧುತ್ವವನ್ನು ಪ್ರಶ್ನಿಸಿದೆ. 40 ಅರ್ಜಿಗಳನ್ನು ಆಲಿಸಿದ ನಂತರ ಇಂದು ತೀರ್ಪು ನೀಡಲಿದೆ.

ಈ ಮಸೂದೆಯನ್ನು 2019 ರ ಜನವರಿಯಲ್ಲಿ ಕೆಳಮನೆ ಮತ್ತು ಮೇಲ್ಮನೆಗಳಲ್ಲಿ ಅಂಗೀಕರಿಸಲಾಯಿತು ಮತ್ತು ನಂತರ ಅಂದಿನ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಅನುಮೋದಿಸಿದ್ದರು. EWS ಕೋಟಾವು SC ಗಳು, ST ಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ (OBCs) ಅಸ್ತಿತ್ವದಲ್ಲಿರುವ 50 ಪ್ರತಿಶತ ಮೀಸಲಾತಿಗಿಂತ ಹೆಚ್ಚಾಗಿರುತ್ತದೆ ಎಂದು ಆಕ್ಷೇಪಗಳು ವ್ಯಕ್ತವಾಗಿದ್ದವು.

ಇಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಯುಯು ಲಲಿತ್ ಈ ಕುರಿತು ತೀರ್ಪು ಹೊರಬೀಳಲಿದೆ. ನ.8 ರಂದು ಭಾರತದ ಮುಖ್ಯ ನ್ಯಾಯಮೂರ್ತಿಯವರು ನಿವೃತ್ತರಾಗಲಿದ್ದು ಅವರ ಕೊನೆಯ ಕೆಲಸದ ದಿನವೂ ಇಂದೇ ಆಗಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!