ಇಂಧನ ಮತ್ತು ಗೋಧಿ ಪೂರೈಕೆಗೆ ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಂಡ ತಾಲಿಬಾನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಗ್ಯಾಸೋಲಿನ್, ಡೀಸೆಲ್, ಗ್ಯಾಸ್ ಇತ್ಯಾದಿ ಇಂಧನ ಮತ್ತು ಗೋಧಿಯನ್ನು ಅಪ್ಘಾನಿಸ್ತಾನಕ್ಕೆ ಪೂರೈಸಲು ತಾಲಿಬಾನ್ ಸರ್ಕಾರವು ರಷ್ಯಾದೊಂದಿಗೆ ತಾತ್ಕಾಲಿಕ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಅಫ್ಘಾನಿಸ್ತಾನದ ಹಂಗಾಮಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಹಾಜಿ ನೂರುದ್ದೀನ್ ಅಜೀಜಿ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್‌ ವರದಿ ಮಾಡಿದೆ.

ಅಪ್ಘಾನಿಸ್ತಾನದ ವಾಣಿಜ್ಯ ಸಚಿವಾಲಯವು ತನ್ನ ವ್ಯಾಪಾರ ಪಾಲುದಾರರನ್ನು ವೈವಿಧ್ಯಗೊಳಿಸಲು ಕೆಲಸ ಮಾಡುತ್ತಿದೆ ಮತ್ತು ರಷ್ಯಾವು ತಾಲಿಬಾನ್ ಆಡಳಿತಕ್ಕೆ ಸರಾಸರಿ ಜಾಗತಿಕ ಸರಕು ಬೆಲೆಗಳಿಗಿಂತ ರಿಯಾಯಿತಿಯನ್ನು ನೀಡಿದೆ ಎಂದು ಅಜೀಜಿ ಹೇಳಿದ್ದಾರೆ ಎನ್ನಲಾಗಿದೆ.

ಇದು ಕೇವಲ ಒಂದು ವರ್ಷದ ಹಿಂದಷ್ಟೇ ಅಪ್ಘಾನಿಸ್ತಾನದ ಆಡಳಿತ ವಹಿಸಿಕೊಂಡ ತಾಲೀಬಾನ್‌ ಸರ್ಕಾರದ ಮೊದಲ ಪ್ರಮುಖ ಅಂತರರಾಷ್ಟ್ರೀಯ ಆರ್ಥಿಕ ಒಪ್ಪಂದವಾಗಿದೆ.

ಆದರೆ, ಯುಎಸ್‌ ಪಡೆಗಳನ್ನು ಅಪ್ಘಾನಿಸ್ತಾನದಿಂದ ಹಿಂತೆಗದು ಕೊಂಡ ನಂತರ ಕಾಬೂಲನ್ನು ಆಕ್ರಮಿಸಿಕೊಂಡು ಅಧಿಕಾರಕ್ಕೆ ಬಂದಿರುವ ತಾಲಿಬಾನ್‌ ಗುಂಪನ್ನು ಯಾವುದೇ ಪಾಶ್ಚಿಮಾತ್ಯ ದೇಶಗಳು ಔಪಚಾರಿಕವಾಗಿ ಗುರುತಿಸುವುದಿಲ್ಲ. ತಾಲೀಬಾನ್‌ ಮಾನವ ಹಕ್ಕುಗಳ ಬಗ್ಗೆ, ವಿಶೇಷವಾಗಿ ಮಹಿಳೆಯರ ಹಾದಿಯನ್ನು ಬದಲಾಯಿಸಬೇಕಾಗಿದೆ ಮತ್ತು ಔಪಚಾರಿಕ ಮನ್ನಣೆಯನ್ನು ಪಡೆಯಲು ಅಂತರರಾಷ್ಟ್ರೀಯ ಉಗ್ರಗಾಮಿ ಗುಂಪುಗಳೊಂದಿಗೆ ಸಂಬಂಧವನ್ನು ಕಡಿತಗೊಳಿಸಿದೆ ಎಂದು ಸಾಬೀತುಪಡಿಸುವ ಅಗತ್ಯವಿದೆ ಎಂದು ಪಾಶ್ಚಿಮಾತ್ಯ ರಾಜತಾಂತ್ರಿಕರು ಹೇಳಿದ್ದಾರೆ.

ರಷ್ಯಾವೂ ಕೂಡ ಅಧಿಕೃತವಾಗಿ ತಾಲಿಬಾನ್ ಸರ್ಕಾರವನ್ನು ಗುರುತಿಸುವುದಿಲ್ಲ,ಆದರೆ ಈ ಒಪ್ಪಂದದ ಪ್ರಕಾರ ರಷ್ಯಾವು ವಾರ್ಷಿಕವಾಗಿ ಒಂದು ಮಿಲಿಯನ್ ಟನ್ ಗ್ಯಾಸೋಲಿನ್, ಒಂದು ಮಿಲಿಯನ್ ಟನ್ ಡೀಸೆಲ್, 500,000 ಟನ್ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (ಎಲ್‌ಪಿಜಿ) ಮತ್ತು ಎರಡು ಮಿಲಿಯನ್ ಟನ್ ಗೋಧಿಯನ್ನು ಪೂರೈಸುತ್ತದೆ ಎಂದು ಅಜೀಜಿ ಹೇಳಿರುವುದಾಗಿ ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!