Thursday, August 11, 2022

Latest Posts

ಪಂಜ್ಶೀರ್ ನಮ್ಮ ವಶದಲ್ಲಿದೆ ಎಂದ ತಾಲಿಬಾನ್: ನಾವಿನ್ನೂ ಸೋತಿಲ್ಲ ಎಂದ ಪ್ರತಿರೋಧ ಪಡೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಅಫ್ಘಾನಿಸ್ತಾನ ಸಂಪೂರ್ಣ ತಾಲಿಬಾನಿಗಳ ವಶವಾಗದಂತೆ ಮಾಡಿದ್ದು ಪಂಜ್ಶೀರ್ ಪ್ರಾಂತ್ಯ. ಇದೀಗ ಪಂಜ್ಶೀರ್‌ನನ್ನು ವಶಪಡಿಸಿಕೊಂಡಿದ್ದೇವೆ ಎಂದು ತಾಲಿಬಾನಿ ಮುಖಂಡರು ಹೇಳಿದ್ದಾರೆ.
ಆದರೆ ಈ ಹೇಳಿಕೆಯನ್ನು ಪ್ರತಿರೋಧ ಪಡೆಗಳು ಅಲ್ಲಗಳೆದಿವೆ.
ತಾಲಿಬಾನಿಗಳು ಹೋರಾಡುತ್ತಿರುವ ಕಡೆಯ ಪ್ರದೇಶ ಪಂಜ್ಶೀರ್ ನಮ್ಮ ವಶದಲ್ಲಿದೆ ಎಂದು ತಾಲಿಬಾನ್ ಸೇನೆ ಹೇಳಿದೆ. ಅಲ್ಲಾ ಕೃಪೆಯಿಂದ ನಾವು ಸಂಪೂರ್ಣವಾಗಿ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿದ್ದೇವೆ. ಪಂಜ್ಶೀರ್‌ನಲ್ಲಿ ಸಮಸ್ಯೆ ಸೃಷ್ಟಿಸುತ್ತಿದ್ದವರನ್ನು ಮಣಿಸಿದ್ದೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಾಲಿಬಾನ್ ಹೇಳಿದೆ.
ಆದರೆ ಈ ಹೇಳಿಕೆಯನ್ನು ಪಂಜ್ಶೀರ್ ನಾಯಕರು ನಿರಾಕರಿಸಿದ್ದು, ಸೋಲನ್ನು ಒಪ್ಪಿಕೊಂಡಿಲ್ಲ ಎಂದಿದ್ದಾರೆ. ಈ ಬಗ್ಗೆ ಪಂಜ್ಶೀರ್ ಕಣಿವೆಯ ನಾಯಕರಾದ ಮಾಜಿ ಅಧ್ಯಕ್ಷ ಅಮರುಲ್ಲಾ ಸಲೇಹ್ ಮಾತನಾಡಿದ್ದು, ನಾವು ಕಷ್ಟದ ಪರಿಸ್ಥಿತಿಯಲ್ಲಿ ಇದ್ದೇವೆ. ಆದರೆ ಸೋತಿಲ್ಲ ಎಂದಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss