ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪ್ರತಿ ಕ್ಷೇತ್ರದಲ್ಲೂ ಕೊಡವ ಸಂಸ್ಕೃತಿ ಬಿತ್ತುವ ಕೆಲಸವಾಗಬೇಕು: ಪಾರ್ವತಿ ಅಪ್ಪಯ್ಯ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………

ಹೊಸ ದಿಗಂತ ವರದಿ ವಿಜಯಪುರ:

ಕೊಡಗು ನಾಡು, ನುಡಿ, ಸಂಸ್ಕೃತಿಯನ್ನು ಪ್ರತಿಯೊಂದು ಕ್ಷೇತ್ರದಲ್ಲೂ ಬಿತ್ತುವ ಕೆಲಸ ಕೊಡವರಿಂದ ಆಗಬೇಕು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಹೇಳಿದರು.

ನಗರದ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ನಡೆದ ‘ಕೊಡವ ಚೆರ್ ಸಿನಿಮಾ ಪೈಪೋಟಿ’ (ಕೊಡವ ಕಿರುಚಿತ್ರ ಸ್ಪರ್ಧೆ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೊಡಗಿನ ಜನರಲ್ಲಿ ಕಲೆಗೆ ಹೆಚ್ಚಿನ ಆಸಕ್ತಿ ಇರುವುದು ಸಂತಸದ ಸಂಗತಿ. ದೇಶಕ್ಕೆ ಉತ್ತಮ ಯೋಧರನ್ನು ನೀಡುವ ಕೊಡಗು, ಸಾಹಿತ್ಯ, ಸಂಸ್ಕೃತಿಯಲ್ಲಿಯೂ ಸಹ ತನ್ನದೆ ಆದ ಛಾಪು ಮೂಡಿಸಿರುವುದು ವಿಶೇಷವೇ ಸರಿ. ಕೊಡಗಿನ ಕಿರು ಚಿತ್ರಗಳು ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದಿವೆ. ಅಂತಹ ಕಿರು ಚಿತ್ರಗಳನ್ನು ನಿರ್ಮಿಸುವುದು ಅತ್ಯಗತ್ಯ ಎಂದು ಅವರು ನುಡಿದರು.

ಕೊಡಗು ಕಾಫಿ ನಾಡು ಮಾತ್ರವಲ್ಲದೆ ಕಲೆಗಳ ಬೀಡು ಎಂಬುದನ್ನು ರಾಜ್ಯದ ಜನತೆ ಸ್ಮರಿಸಬೇಕು. ಜೊತೆಗೆ ಕೊಡಗಿನ ಸಂಸ್ಕೃತಿ ವೈಭವವನ್ನು ಸಾರುವ ನಿಟ್ಟಿನಲ್ಲಿ ಜನರಿಗೆ ನೇರವಾಗಿ ಚಿತ್ರಗಳ ಮೂಲಕ ತಿಳಿಸುವ ಪ್ರಯತ್ನ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಹಿರಿಯ ಸಿನಿಮಾ ಕಲಾವಿದ ನೆರವಂಡ ಉಮೇಶ್ ಅವರು ಮಾತನಾಡಿ ‘ಸಾರಿ’ ಎಂಬ ಆಂಗ್ಲ ಭಾಷೆಯ 5 ನಿಮಿಷಗಳ ಕಿರು ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಬಂದಿದೆ. ಒಂದು ಚಲನಚಿತ್ರ 2.30 ಗಂಟೆಗಳಲ್ಲಿ ಕಥೆಯ ಸಾರಾಂಶ ತಿಳಿಸಲು ಕಷ್ಟಪಡುವ ಕಾಲದಲ್ಲಿ ಕಿರು ಚಿತ್ರಗಳು ಸಂದೇಶಗಳನ್ನು ಮನಮೋಹಕವಾಗಿ ನಿಗದಿತ ಸಮಯದಲ್ಲಿ ಹೇಳುವುದು ವಿಸ್ಮಯವೇ ಸರಿ ಎಂದು ನುಡಿದರು.

ಚಲನಚಿತ್ರ ಎಂಬುದು ಜೂಜಿನಂತೆ ಒಮ್ಮೆ ಬಂಧಿಯಾದರೆ ಹೊರಬರುವ ಮಾತಿಲ್ಲ. ಗೆಲುವನ್ನು ಪಡೆಯುವ ಹಂಬಲದಿAದ 5-10 ವರ್ಷಗಳಿಗೊಮ್ಮೆ ಉತ್ತಮ ಚಿತ್ರವನ್ನು ನೀಡಿದರೂ ಪ್ರತಿ ಬಾರಿಯೂಗೆಲುವು ಸಿಗುವುದು ಸುಲಭವಲ್ಲ. ನಿರಂತರ ಶ್ರಮದ ಫಲ ಉತ್ತಮ ಚಿತ್ರಗಳು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಅಕಾಡೆಮಿಯ ಪ್ರಕಟಿತ ಪುಸ್ತಕಗಳು ಮತ್ತು ಸಾಕ್ಷ್ಯ ಚಿತ್ರ ಪ್ರದರ್ಶನ ನಡೆಯಿತು. ಸದಸ್ಯರಾದ ಸುಭಾಷ್ ನಾಣಯ್ಯ ಮತ್ತಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss