ನೀನು ಸುಳ್ಳುಗಾರ್ತಿ ಎಂದ ಶಿಕ್ಷಕಿ: ಮನನೊಂದು ಮಹಡಿಯಿಂದ ಜಿಗಿದ ವಿದ್ಯಾರ್ಥಿನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ನೀನು ಸುಳ್ಳುಗಾರ್ತಿ ಎಂದು ಶಿಕ್ಷಕರೊಬ್ಬರು ವಿದ್ಯಾರ್ಥಿನಿಯನ್ನು ಹೇಳಿದಕ್ಕೆ ಮನನೊಂದು ಆಕೆ ಸರ್ಕಾರಿ ಶಾಲೆಯ ಮೊದಲ ಮಹಡಿಯಿಂದ ಜಿಗಿದ ಘಟನೆ ತಮಿಳುನಾಡಿನ ಕರೂರ್‌ನಲ್ಲಿ ನಡೆದಿದೆ.

10ನೇ ತರಗತಿಯ ವಿದ್ಯಾರ್ಥಿನಿಯನ್ನು ಇದೀಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ವಿದ್ಯಾರ್ಥಿನಿ ಎಡವಿ ಬಿದ್ದಿದ್ದಾಳೆಯೇ ಎಂದು ತನಿಖೆ ನಡೆಸಿದ್ದಾರೆ. ಈ ವೇಳೆ ವಿದ್ಯಾರ್ಥಿನಿ ಘಟನೆಯನ್ನು ವಿವರಿಸಿದ್ದಾಳೆ.

ನಮ್ಮ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಓರ್ವ ಹುಡುಗಿ ಬಂದು ಆಕೆಯ ಮೊಬೈಲ್‍ನಲ್ಲಿ ಕಾರ್ಯಕ್ರಮದ ವೀಡಿಯೋವನ್ನು ತೆಗೆದುಕೊಡಲು ಹೇಳಿದಳು. ಮೊದಲು ನಾನು ಒಪ್ಪಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಕೆ ಮೊಬೈಲ್‍ನ್ನು ಬೇರೆಯವರಿಗೆ ರವಾನಿಸಲು ತಿಳಿಸಿದಳು. ಆದರೆ ಆ ವ್ಯಕ್ತಿ ದೂರದ್ದಲ್ಲಿದ್ದ ಕಾರಣ ನಾನೇ ಕಾರ್ಯಕ್ರಮದ ವೀಡಿಯೋವನ್ನು ಮಾಡುವ ಪರಿಸ್ಥಿತಿ ಬಂತು. ಹಾಗೆ ಮಾಡಿದ್ದಕ್ಕೆ ಟೀಚರ್ ನನ್ನನ್ನು ಗದರಿಸಿದ್ದರು. ಆಗ ನಾನು ನಡೆದ ವಿಷಯ ತಿಳಿಸಿದರೂ ಅವರು ನನ್ನ ಮಾತನ್ನು ನಂಬಲಿಲ್ಲ. ಎಲ್ಲರ ಮುಂದೆ ನನ್ನನ್ನು ಸುಳ್ಳುಗಾರ್ತಿ ಎಂದು ಕರೆದರು. ಇದರಿಂದಾಗಿ ಬೇರೆ ವಿದ್ಯಾರ್ಥಿಗಳು ನನ್ನನ್ನು ಅದೇ ಭಾವನೆಯಿಂದ ನೋಡಿದರು. ಈ ಹಿನ್ನೆಲೆಯಲ್ಲಿ ಮನನೊಂದು ಮಹಡಿಯಿಂದ ಜಿಗಿದೆ ಎಂದು ತಿಳಿಸಿದಳು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!