ಮಹಿಳೆಯ ದೇಹದೊಳಗಿತ್ತು ಭಯಾನಕ ಪ್ಯಾರಾಸೈಟ್, ಈಕೆ ತಿಂದಿದ್ದಾದ್ರೂ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಿಳೆಯೊಬ್ಬರು ಪುಡಿಂಗ್ ಒಂದನ್ನು ತಿಂದ ನಂತರ  ಆಕೆಯ ದೇಹಕ್ಕೆ ಪ್ಯಾರಾಸೈಟ್ ಪ್ರವೇಶವಾದ ಭಯಾನಕ ಪ್ರಕರಣ ವಿಯೆಟ್ನಾಂನಲ್ಲಿ ನಡೆದಿದೆ.

ಹಸಿ ರಕ್ತ ಹಾಗೂ ಬೇಯಿಸಿದ ಮಾಂಸದಿಂದ ತಯಾರಾಗುವ ಟೈಟ್ ಕ್ಯಾನ್ (Tiet canh) ಎಂಬ ಸ್ಥಳೀಯ ಖಾದ್ಯವನ್ನು ಮಹಿಳೆ ಮನೆಯಲ್ಲಿ ತಾನೇ ತಯಾರಿಸಿದ್ದಾಳೆ. ಇದನ್ನು ತಿಂದ ನಂತರ ಮೆದುಳಿಗೆ ಪ್ಯಾರಾಸೈಟ್ ಹೊಕ್ಕಿದ್ದರೂ ಆಕೆ ಜೀವಂತವಾಗಿದ್ದಾಳೆ.

Cách hãm tiết thỏ đúng điệu, đơn giản lại thơm ngonಟೈಟ್ ಕ್ಯಾನ್ ಸೇವಿಸಿದ ನಂತರ ತೀವ್ರ ಅಸ್ವಸ್ಥರಾಗಿದ್ದು, ಹನೋಯಿಗೆ ತೀವ್ರ ತಲೆನೋವು ಬಂದಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಷ್ಟೊತ್ತಿಗಾಗಲೇ ಹನೋಯಿ ಕೈ ಹಾಗೂ ಕಾಲುಗಳ ಒಳಪದರದಲ್ಲಿ ಹುಳಗಳು ಓಡಾಡುವುದು ಕಾಣಿಸುತ್ತಿತ್ತು.

ಸ್ಕ್ಯಾನಿಂಗ್‌ನಲ್ಲಿ ಈ ಹುಳಗಳು ಮೆದುಳಿಗೆ ಹೋಗಿರುವುದು ಕಾಣಿಸಿದೆ. ವೈದ್ಯರ ಚಿಕಿತ್ಸೆಯಿಂದ ಹನೋಯಿ ಬದುಕುಳಿದಿದ್ದಾರೆ. ಈ ಪುಡ್ಡಿಂಗ್ ತಿನ್ನುವ ಮುನ್ನ ಸಾಕಷ್ಟು ಜಾಗ್ರತೆ ವಹಿಸಬೇಕು ಎಂದು ವೈದ್ಯರು ಹೇಳಿದ್ದಾರೆ. ವಿಯೆಟ್ನಾಂನಲ್ಲಿ ಹಸಿ ರಕ್ತದ ಪುಡ್ಡಿಂಗ್ ಮಾಮೂಲಿ ಆಹಾರ, ಆದರೆ ಹೆಚ್ಚು ಮಂದಿ ಇದನ್ನು ಮನೆಯಲ್ಲೇ ಮಾಡಿ ತಿನ್ನಲು ಬಯಸುತ್ತಾರೆ. ಎಷ್ಟೆಲ್ಲಾ ಜಾಗರೂಕರಾಗಿದ್ದರೂ ನನಗೆ ಈ ಸಮಸ್ಯೆ ಬಂದಿದೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!