Wednesday, August 10, 2022

Latest Posts

‘ಕೊರೋನಾ ಮೂರನೇ ಅಲೆ ಕಡಿಮೆ ಮಾರಣಾಂತಿಕ’

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಈಗಾಗಲೇ ಎರಡು ಡೋಸ್ ಲಸಿಕೆ ಪಡೆದವರಿಗೆ, ಸೋಂಕು ತಗುಲಿ ಗುಣಮುಖರಾದವರಿಗೆ ಹಾಗೂ ಮಕ್ಕಳಿಗೆ ಕೊರೋನಾ ಮೂರನೆ ಅಲೆ ಕಡಿಮೆ ಮಾರಣಾಂತಿಕವಾಗಿರುತ್ತದೆ ಎಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವರದಿ ತಿಳಿಸಿದೆ.
ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಆಜೆನೆಟಿಸ್ಟ್ ಪ್ರೊಫೆಸರ್ ಜ್ಞಾನೇಶ್ವರ್ ಚೌಬೆ ಅವರು ಈ ಬಗ್ಗೆ ಮಾಹಿತಿ ನಿಡಿದ್ದಾರೆ. ಲಸಿಕೆ ಪಡೆದ ಎಲ್ಲರೂ ಮೂರನೇ ಅಲೆ ವೇಳೆಗೆ ಸುರಕ್ಷಿತ ಗುಂಪಿಗೆ ಸೇರುತ್ತಾರೆ. ಮೂರನೆ ಅಲೆ ಬರುವುದು ಖಚಿತ ಆದರೆ ಅದು ಮಾರಣಾಂತಿಕವಲ್ಲ ಎಂದಿದ್ದಾರೆ.
ಮೂರನೇ ಅಲೆ ಇನ್ನೂ ಮೂರು ತಿಂಗಳ ನಂತರ ಅಪ್ಪಳಿಸಲಿದೆ. ಅಷ್ಟರೊಳಗಾಗಲೇ ಜನ ಲಸಿಕೆ ಪಡೆದಿರುತ್ತಾರೆ. ಅವರ ರೋಗನಿರೋಧಕ ಶಕ್ತಿ ಹೆಚ್ಚಿರುತ್ತದೆ ಎಂದಿದ್ದಾರೆ. ಕಾಲಕಾಲಕ್ಕೆ ಕೊರೋನಾ ಉತ್ತುಂಗಕ್ಕೇರುತ್ತದೆ. ಆದರೆ ಅಂತಿಮವಾಗಿ ಅದು ಕಡಿಮೆಯಾಗಲೇಬೇಕಿದೆ. ಪ್ರತಿಕಾಯಗಳ ಮಟ್ಟ ಕಡಿಮೆಯಾದಂತೆ ಸೋಂಕು ಕಡಿಮೆಯಾಗಲಿದೆ. ಈಗಾಗಲೇ ಸುರಕ್ಷಿತ ಗುಂಪಿಗೆ ಸೇರಿದ ಜನರಿಗೆ ಮರಣದ ಅಪಾಯ ಇಲ್ಲ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss