Wednesday, August 10, 2022

Latest Posts

ಮುಕೇಶ್​​ ಅಂಬಾನಿ ಮನೆ ಬಳಿ ಪತ್ತೆಯಾದ ಕಾರಿನಲ್ಲಿ ಸ್ಫೋಟಕದ ಜತೆಗಿತ್ತು ಬೆದರಿಕೆ ಪತ್ರ!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ದೇಶದ ಶ್ರೀಮಂತ ಉದ್ಯಮಿ ಮುಕೇಶ್​​ ಅಂಬಾನಿ ನಿವಾಸದ ಬಳಿ ನಿನ್ನೆ ಸ್ಫೋಟಕಗಳನ್ನ ಇಟ್ಟಿದ್ದ ಎಸ್​​ಯುವಿ ವಾಹನ ಪತ್ತೆಯಾಗಿದ್ದು, ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಪ್ರಕ್ರನ ಕುರಿತು ತನಿಖೆ ಚುರುಕುಗೊಳಿಸಿರುವ ಪೊಲೀಸರರಿಗೆ ಮತ್ತಷ್ಟು ಮಾಹಿತಿಗಳು ಸಿಕ್ಕಿದೆ.

ಹೌದು, ನಿನ್ನೆ ಕಾರ್ಮೈಕಲ್ ರಸ್ತೆಯಲ್ಲಿ ಅಂಬಾನಿ ನಿವಾಸದ ಬಳಿ ಪತ್ತೆಯಾದ ವಾಹನದಲ್ಲಿ, ಮುಕೇಶ್​ ಅಂಬಾನಿ ಹಾಗೂ ಅವರ ಪತ್ನಿ ನೀತಾಗೆ ಬೆದರಿಕೆ ಹಾಕಿರೋ ನೋಟ್​ವೊಂದು ಲಭ್ಯವಾಗಿದೆ. ಕಾರ್​ನಲ್ಲಿರೋ ಜಿಲೆಟಿನ್ ಸ್ಫೋಟಕವನ್ನು ಅಸೆಂಬಲ್ ಮಾಡಿಲ್ಲ. ಆದ್ರೆ ಮುಂದಿನ ಬಾರಿ ಮಾಡ್ತೀವಿ ಎಂದು ಬರೆಯಲಾಗಿದೆ.

ಇನ್ನು ಇಂಗ್ಲಿಷ್​​ನಿಂದ ಹಿಂದಿಗೆ ಅನುವಾದ ಮಾಡಿ ಸಂದೇಶ ಬರೆದಿದ್ದು, ಅದ್ರಲ್ಲಿ ಹಲವಾರು ವ್ಯಾಕರಣ ದೋಷವಿದೆ. ವ್ಯಕ್ತಿ ಅರೆ ವಿದ್ಯಾವಂತನಾಗಿರಬಹುದು ಅಥವಾ ಆ ರೀತಿ ಬಿಂಬಿಸಲು ಯತ್ನಿಸಿರಬಹುದು ಎಂದು ಮುಂಬೈ ಪೊಲೀಸ್​ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ಇತ್ತ ಗಾಮ್ದೇವಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ವಾಹನ ಪತ್ತೆಯಾಗಿತ್ತು. ಪೊಲೀಸರಿಗೆ ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ತೆರಳಿದ್ರು. ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳ ಬಂದು ಪರಿಶೀಲಿಸಿದಾಗ ಜಿಲೆಟಿನ್ ಪತ್ತೆಯಾಗಿದೆ. ಅದು ಜೋಡಿಸಲಾದ ಸ್ಫೋಟಕ ವಸ್ತುವಾಗಿರಲಿಲ್ಲ. ಈ ಬಗ್ಗೆ ನಮ್ಮ ತನಿಖೆ ಮುಂದುವರೆದಿದೆ ಎಂದು ಮುಂಬೈ ಪೊಲೀಸ್​ ವಕ್ತಾರ ಡಿಸಿಪಿ ಚೈತನ್ಯ ತಿಳಿಸಿದ್ದಾರೆ.

ಸದ್ಯಅಂಬಾನಿ ನಿವಾಸದ ಬಳಿಯಿಂದ ವಾಹನವನ್ನ ತೆರವುಗೊಳಿಸಲಾಗಿದೆ. ಕಾರ್​ನಲ್ಲಿ ಕೆಲವು ನಂಬರ್​ ಪ್ಲೇಟ್​ಗಳು ಸಿಕ್ಕಿದ್ದು ಅದರ ಬಗ್ಗೆಯೂ ಪರಿಶೀಲನೆ ಮಾಡಲಾಗ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇನ್ನು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ, ಆ ಕಾರನ್ನ ಗುರುವಾರ ಮಧ್ಯರಾತ್ರಿ 1 ಗಂಟೆ ಸಮಯದಲ್ಲಿ ತಂದು ನಿಲ್ಲಿಸಲಾಗಿತ್ತು ಎಂದು ತಿಳಿದುಬಂದಿದೆ. ವಿಜಯ್ ಸ್ಟೋರ್ಸ್​ ಎಂಬ ಅಂಗಡಿ ಬಳಿ ಕಾರ್ ನಿಲ್ಲಿಸಲಾಗಿದ್ದು, ವಾಹನ ಆಗಮಿಸುವ ದೃಶ್ಯ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಾಹನ ತಂದ ಚಾಲಕ ನಸುಕಿನ ಜಾವ 3 ಗಂಟೆವರೆಗೂ ಅಂದ್ರೆ ಸುಮಾರು 2 ಗಂಟೆ ಕಾಲ ಕಾರಿನಿಂದ ಕೆಳಗಿಳಿದಿರಲಿಲ್ಲ. ಆತ ಫೇಸ್​ ಮಾಸ್ಕ್​ ಧರಿಸಿದ್ದ ಹಾಗೂ ತಲೆಯನ್ನ ಹುಡ್ಡಿಯಿಂದ ಮುಚ್ಚಿಕೊಂಡಿದ್ದ ಅಂತ ತಿಳಿದುಬಂದಿದೆ. ಸದ್ಯ ಪೊಲೀಸರು ಸುತ್ತಮುತ್ತ ಏರಿಯಾದ ಮತ್ತಷ್ಟು ಸಿಸಿಟಿವಿ ದೃಶ್ಯಾವಳಿಗಳನ್ನ ಕಲೆ ಹಾಕ್ತಿದ್ದು, ಅವುಗಳನ್ನ ಆಧರಿಸಿ ಆ ವ್ಯಕ್ತಿಯನ್ನ ಪತ್ತೆಹಚ್ಚಲು ಬಲೆ ಬೀಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss