Sunday, April 11, 2021

Latest Posts

ನೀರಲ್ಲಿ ಆಡಲು ಹೋದ ಮೂವರು ಮಕ್ಕಳು ನೀರುಪಾಲು

ಹೊಸದಿಗಂತ ವರದಿ,ಪಾಂಡವಪುರ:

ನೀರಲ್ಲಿ ಆಡಲು ಹೋದ ಮೂವರು ಮಕ್ಕಳು ನೀರು ಪಾಲಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ಬಳೆಅತ್ತಿಗುಪ್ಪೆ ಗ್ರಾಮದಲ್ಲಿ ಗುರುವಾರ ನಡೆದಿದೆ.
ತಾಲೂಕಿನ ಬಳೆಅತ್ತಿಗುಪ್ಪೆ ಗ್ರಾಮದ ಹೊರ ವಲಯದಲ್ಲಿರುವ ಕೃ ಹೊಂಡದ ನೀರಿನಲ್ಲಿ ಮೂವರು ಗಂಡು ಮಕ್ಕಳು ಆಡಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಇಡೀ ಗ್ರಾಮವನ್ನೇ ಬೆಚ್ಚಿ ಬೀಳಿಸಿದೆ.
ಬಳೇಅತ್ತಿಗುಪ್ಪೆ ಗ್ರಾಮದ ಮಹದೇವಪ್ಪ ಹಾಗೂ ಭಾರತಿ ದಂಪತಿಯ ಇಬ್ಬರು ಗಂಡು ಮಕ್ಕಳಾದ ಚಂದ್ರು (11) ಹಾಗೂ ಕಾರ್ತಿಕ್ (9) ಮತ್ತು ಇದೇ ಗ್ರಾಮದ ಮಲ್ಲಿಕಾರ್ಜುನ ಹಾಗೂ ಸುಮಾ ದಂಪತಿಯ ಪುತ್ರ ರಿತೇಶ್ (8) ಮೃತಪಟ್ಟಿರುವ ದುರ್ದೈವಿಯಾಗಿದ್ದಾರೆ.
ಗ್ರಾಮದ ಹೊರವಲಯದಲ್ಲಿರುವ ಕೃ ಹೊಂಡಕ್ಕೆ ಆಟ ಆಡಲು ಹೋಗಿದ್ದ ಮೂವರು ಮಕ್ಕಳು ನೀರಿನಲ್ಲಿ ಆಟ ಆಡುತ್ತಿದ್ದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುತ್ತಾರೆ. ಮೂವರ ಮೃತ ದೇಹದಲ್ಲಿ ಒಂದು ದೇಹ ನೀರಿನಲ್ಲಿ ತೇಲುತ್ತಿದ್ದಾಗ ಪಕ್ಕದ ಜಮೀನು ರೈತರು ಅಪೇಕ್ಷಿಸಿ ಜೋರಾಗಿ ಕೂಗಿಕೊಂಡಾಗ ಇತರರು ಸ್ಥಳಕ್ಕೆ ಆಗಮಿಸಿದ್ದಾರೆ. ನಂತರ ಗ್ರಾಮಕ್ಕೆ ದೂರವಾಣಿ ಮೂಲಕ ವಿಷಯ ತಿಳಿಸಿ ಸ್ಥಳಕ್ಕೆ ಅನೇಕರು ಬಂದ ನಂತರ ನೀರಿನ ಬದಿಯಲ್ಲಿ ಮುಳುಗಿದ್ದ ಉಳಿದ ಎರಡು ಬಾಲಕರ ಮೃತ ದೇಹವನ್ನು ದಡಕ್ಕೆ ಎಳೆದಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss