ರಶ್ಮಿಕಾ ಅಭಿನಯದ ಈ ಸಿನಿಮಾ ಟಿಕೆಟ್ ದರ ಕೇವಲ 150 ರೂ.

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಶ್ಮಿಕಾ ಮಂದಣ್ಣ ಹಾಗೂ ಅಮಿತಾಭ್ ಬಚ್ಚನ್ ಅಭಿನಯದ ಗುಡ್‌ಬೈ ಅ.7ರಂದು ಬಿಡುಗಡೆಯಾಗಲಿದೆ.
ಈ ಬೆನ್ನಲ್ಲೇ ಚಿತ್ರತಂಡ ಸಿಹಿಸುದ್ದಿ ನೀಡಿದ್ದು, ಸಿನಿಮಾ ಟಿಕೆಟ್ ದರ ಕೇವಲ150 ರೂ.ಗೆ ನಿಗದಿ ಮಾಡಿದೆ. ಥಿಯೇಟರ್‌ಗಳಿಗೆ ಬಂದು ಸಿನಿಮಾ ನೋಡುವುದು ಕಡಿಮೆಯಾಗಿದೆ, ಸಿನಿಮಾ ಥಿಯೇಟರ್‌ಗಳಲ್ಲಿ ನೋಡಲು ಪ್ರೋತ್ಸಾಹ ನೀಡಲು ಈ ರೀತಿ ಮಾಡಲಾಗಿದೆ ಎಂದು ಚಿತ್ರತಂಡ ಹೇಳಿದೆ.

GoodBye movie poster release, Rashmika Mandanna seen with Amitabh Bachchan ಅ.7ರಂದು ಸಿನಿಮಾ ನೋಡಿದರೆ ಟಿಕೆಟ್ ಬೆಲೆ 150ರೂ. ಇರಲಿದೆ ಎಂದು ತಂಡ ಹೇಳಿದೆ. ಅಂತಾರಾಷ್ಟ್ರೀಯ ಸಿನಿಮಾ ದಿನದಂದು ಎಲ್ಲ ಸಿನಿಮಾಗಳ ಬೆಲೆ 75 ರೂ. ಆಗಿತ್ತು. ಆಗ ಜನ ಮುಗಿಬಿದ್ದು ಸಿನಿಮಾ ನೋಡಿದ್ದರು. ಟಿಕೆಟ್ ದರ ದುಬಾರಿಯಾದರೆ ಒಬ್ಬರೇ ಸಿನಿಮಾ ನೋಡುತ್ತಾರೆ. ಅದೇ ಹಣ ಕಡಿಮೆಯಾದರೆ ಹೆಚ್ಚು ಮಂದಿ ಸಿನಿಮಾ ನೋಡುತ್ತಾರೆ. ನಮ್ಮ ಸಿನಿಮಾ ಹೆಚ್ಚು ಜನರನ್ನು ತಲುಪಬೇಕು ಎನ್ನುತ್ತಿದೆ ಚಿತ್ರತಂಡ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!