ಹಳಿ ದಾಟುತ್ತಿದ್ದ 12 ಆನೆಗಳ ಪ್ರಾಣ ಉಳಿಸಿತು ಲೊಕೊ ಪೈಲಟ್‌ಗಳ ಸಮಯಪ್ರಜ್ಞೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಬ್ಬರು ಲೊಕೊ ಪೈಲಟ್‌ಗಳ ಸಮಯಪ್ರಜ್ಞೆ 12 ಆನೆಗಳ ಪ್ರಾಣ ಉಳಿಸಿದೆ. ಈ ಅಪರೂಪದ ಘಟನೆ ಜಾರ್ಖಂಡ್‌ನ ಪಲಾಮು ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ.

ಹೌರಾ-ಜಬಲ್‌ಪುರ್ ಶಕ್ತಿಪುಂಜ್ ಎಕ್ಸೆಪ್ರಸ್ ಸುಮಾರು 70 ಕಿಮೀ ವೇಗದಲ್ಲಿ ದಟ್ಟವಾದ ಕಾಡಿನ ಮೂಲಕ ಸಂಚರಿಸುತ್ತಿತ್ತು. ರೈಲು ನಿಲ್ದಾಣಗಳ ನಡುವೆ ಲೊಕೊಮೆಟಿವ್ ಪೈಲಟ್‌ಗಳು ಮುಂದೆ ಹಳಿಯಲ್ಲಿ ಆನೆಗಳ ಹಿಂಡನ್ನು ಗಮನಿಸಿದ್ದಾರೆ. ತಕ್ಷಣವೇ ತುರ್ತು ಬ್ರೇಕ್ ಬಳಕೆ ಮಾಡಿ ರೈಲು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದು, 12 ಆನೆಗಳು ಇದರಿಂದಾಗಿ ಪ್ರಾಣ ಉಳಿಸಿಕೊಂಡಿವೆ. ಆನೆಗಳು ಹಳಿ ದಾಟುತ್ತಿರುವುದನ್ನು ಗಮನಿಸಿ ತುರ್ತು ಬ್ರೇಕ್ ಅನ್ನು ತ್ವರಿತವಾಗಿ ಎಳೆದೆವು. ಹೀಗಾಗಿ ರೈಲು ಆನೆ ಹಿಂಡಿನಿಂದ 60 ಮೀಟರ್ ದೂರದಲ್ಲಿ ನಿಂತಿತು ಎಂದು ಸಹಾಯಕ ಲೊಕೊ ಪೈಲಟ್ ರಜನಿಕಾಂತ್ ಚೌಬೆ, ಎ.ಕೆ. ವಿದ್ಯಾರ್ಥಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!