Wednesday, June 29, 2022

Latest Posts

ಹಳಿ ಮೇಲೆ ನಿಂತು ವಿಡಿಯೋಕ್ಕೆ ಪೋಸ್ ಕೊಡುತ್ತಿದ್ದ ಯುವಕನ ಮೇಲೆ ಸಂಚರಿಸಿದ ರೈಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಧ್ಯಪ್ರದೇಶದ ಹೋಶಂಗಾಬಾದ್​​​ನ ಇಟಾರ್ಸಿಯಲ್ಲಿ ಯುವಕನೋರ್ವನಿಗೆ ರೈಲು ಡಿಕ್ಕಿ ಹೊಡೆದು ಪ್ರಾಣ ಕಳೆದುಕೊಂಡಿದ್ದಾನೆ.
ಈ ಘಟನೆಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. 22 ವರ್ಷದ ಸಂಜು ಎಂಬ ಯುವಕ ತನ್ನ ಸ್ನೇಹಿತನೊಂದಿಗೆ ಇಟಾರ್ಸಿಯಲ್ಲಿರುವ ಶರದ್ದೇವರ ಭೇಟಿಗೆ ಬಂದಿದ್ದನು. ದೇಗುಲಕ್ಕೆ ತೆರಳಿ ಅಲ್ಲಿಂದ ವಾಪಸ್​​ ಬಂದಿರುವ ಇಬ್ಬರು ಅಲ್ಲಿನ ರೈಲ್ವೆ ಹಳಿ ಬಳಿ ಮೊಬೈಲ್​ನಲ್ಲಿ ವಿಡಿಯೋ ಮಾಡುತ್ತಿದ್ದರು. ಈ ವೇಳೆ ರೈಲಿಗೆ ಸಿಲುಕಿ ಸಂಜು ತನ್ನ ಪ್ರಾಣ ಕಳೆದುಕೊಂಡಿದ್ದಾನೆ.
​ಹಳಿ ಮೇಲೆ ರೈಲು ಬರುತ್ತಿದ್ದಾಗ ಸಂಜು ಅದರ ಮುಂದೆ ನಿಂತುಕೊಂಡಿದ್ದು, ತನ್ನ ಸ್ನೇಹಿತನಿಗೆ ವಿಡಿಯೋ ಮಾಡುವಂತೆ ತಿಳಿಸಿದ್ದಾನೆ. ಈ ವೇಳೆ ರೈಲು ಬಡಿದು ಸಾವನ್ನಪ್ಪಿದ್ದಾನೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss